×
Ad

ಮುಲ್ಕಿ: ಮಹಿಳೆಯ ಕುತ್ತಿಗೆಯಿಂದ ಸರ ಸುಲಿಗೆ ಮಾಡಿದ ಆರೋಪಿ ಬಂಧನ

Update: 2023-11-03 23:11 IST

ಮುಲ್ಕಿ: ಹಳೆಯಂಗಡಿ- ಪಾವಂಜೆ ರಸ್ತೆಯಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಸರ ಸುಲಿಗೆಗೆ ಯತ್ನಿಸಿದ ಮತ್ತು ಕಟಪಾಡಿ ಎಂಬಲ್ಲಿ ಮಹಿಳೆಯ ಕುತ್ತಿಗೆಯಿಂದ ಸರ ಸುಲಿಗೆ ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.‌

ಬಂಧಿತ ಆರೋಪಿಯನ್ನು ಕೈಕಂಬ ಬಡಗೂಳಿಪಾಡಿ ಗ್ರಾಮದ ಮಳಲಿ ಮಟ್ಟಿರೋಡು ನಿವಾಸಿ ವಿನಯ ಪ್ರಸಾದ್ ಜೋಗಿ (30) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತನಿಂದ ಕಳವುಗೈದಿದ್ದ 43.4 ಗ್ರಾಂ ತೂಕದ ಚಿನ್ನದ ಹವಳದ ಸರ ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ ಸೇರಿ ಒಟ್ಟು 2.35 ಲಕ್ಷ ರೂ ಮೌಲ್ಯದ ಸೊತ್ತಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News