×
Ad

ಮುಲ್ಕಿ: ಕ್ಷೀರ ಸಾಗರ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ

Update: 2024-10-04 17:17 IST

ಮುಲ್ಕಿ: ಕ್ಷೀರ ಸಾಗರ ವಿವಿಧೋದ್ದೇಶ ಸಹಕಾರಿ ಸಂಘದ 2023-24ನೇ ಸಾಲಿನ ಮಹಾಸಭೆಯು ಸಂಘದ ಸಭಾ ಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಲಿಡಿಯ ಫುಟಾಡೋ, ನಿರ್ದೇಶಕರಾದ ಹರೀಂದ್ರ ಸುವರ್ಣ, ಶಶಿಕಲಾ ಅಮೀನ್, ವೀರಪ್ಪ, ರಮೇಶ್ ಕೋಟ್ಯಾನ್, ಮೋಹನದಾಸ್, ಕಾರ್ಯ ನಿರ್ವಣಾಧಿಕಾರಿ ರಘುರಾಜ್ ಉಪಸ್ಥಿತರಿದ್ದರು.

ಸಾಧಕರ ನೆಲೆಯಲ್ಲಿ ಸಂಘದ ಸದಸ್ಯರಾದ ಯದೀಶ್ ಅಮೀನ್ ಹಾಗೂ ಅಬ್ದುಲ್ ರಝಾಕ್ ಅವರನ್ನು ಗೌರವಿಸಲಾಯಿತು.

ಇತ್ತೀಚೆಗೆ ನಿಧನರಾದ ಸಂಘದ ಕಾರ್ಯದರ್ಶಿ ಸುಂದರ ಶೆಟ್ಟಿ ಕುಬೆವೂರು, ನಿರ್ದೇಶಕ ಸುಧಾಕರ ಶೆಟ್ಟಿ, ಸದಸ್ಯರಾದ ಹಿಮಕರ ಕೋಟ್ಯಾನ್, ಶಶಿಕಾಂತ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಸ್ವಾಗತಿಸಿದರು. ಕಾರ್ಯನಿರ್ವಣಾಧಿಕಾರಿ ರಘುರಾಜ್ ವಂದಿಸಿದರು.







Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News