×
Ad

ಮುಲ್ಕಿ: ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿಯಾದ ದುಷ್ಕರ್ಮಿಗಳು

Update: 2023-09-17 20:01 IST

ಮುಲ್ಕಿ: ಕೋಲ್ನಾಡು ನಿವಾಸಿ ಸದಾಶಿವ ಶೆಟ್ಟಿ ಎಂಬವರ ಪತ್ನಿ ವಸಂತಿ ಶೆಟ್ಟಿ (77) ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ನಾಲ್ಕು ಜನ ದುಷ್ಕರ್ಮಿಗಳು ಚೂರಿ ತೋರಿಸಿ ಕಿತ್ತು ಪರಾರಿಯಾದ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.

ಕೋಲ್ನಾಡು ಬೆಳ್ಳಾಯರು ನಿವಾಸಿ ಸದಾಶಿವ ಶೆಟ್ಟಿ ಮತ್ತು ವಸಂತಿ ಶೆಟ್ಟಿ ದಂಪತಿ ಮನೆಯಲ್ಲಿ ವಾಸ್ತವ್ಯವಿದ್ದು ಕೆಲಸದ ನಿಮಿತ್ತ ಹಳೆಯಂಗಡಿಗೆ ಹೋಗಿದ್ದವರು ವಾಪಸ್ ಬರುವಾಗ ಪತ್ನಿಯನ್ನು ಮನೆಗೆ ಆಟೋದಲ್ಲಿ ಕಳಿಸಿದ್ದರು.

ವಸಂತಿ ಶೆಟ್ಟಿ ಮನೆಗೆ ಬಂದ ವೇಳೆ ಓರ್ವ ಬಂದು ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ, ಪೆಟ್ರೋಲ್ ತುಂಬಿಸಲು ಬಾಟಲಿ ಬೇಕು ಎಂದು ಹೇಳಿದ್ದಾನೆ. ಈ ಸಂದರ್ಭ ವಸಂತಿ ಶೆಟ್ಟಿ ನೀರಿನ ಖಾಲಿ ಬಾಟಲಿ ಕೊಟ್ಟಿದ್ದು ವ್ಯಕ್ತಿ ಅಲ್ಲಿಂದ ತೆರಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಅದೇ ವ್ಯಕ್ತಿ ಬಂದು ಬೇರೆ ಬಾಟಲಿ ಕೇಳುವಂತೆ ತಿಳಿಸಿ ವಸಂತಿ ಶೆಟ್ಟಿ ಅವರು ಮನೆಯ ಹೊರಗಡೆ ಬರುವಷ್ಟರಲ್ಲಿ ಮೂವರು ದುಷ್ಕರ್ಮಿಗಳು ಚೂರಿಯಿಂದ ಬೆದರಿಸಿ ಕರಿಮಣಿ ಸರವನ್ನು ಎಳೆದಿದ್ದಾರೆ.

ಈ ವೇಳೆ ವಸಂತಿ ಶೆಟ್ಟಿ ಜೋರಾಗಿ ಬೊಬ್ಬೆ ಹಾಕಿದಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಈ ಸಂದರ್ಭ ಕರಿಮಣಿ ಸರದ ಒಂದು ತುಂಡು ಸ್ಥಳದಲ್ಲಿ ಬಿದ್ದಿದೆ.

ಸುಮಾರು ಐದು ಪವನ್ ಚಿನ್ನದ ಕರಿಮಣಿ ಸರ ಎಗರಿಸಿದ್ದಾರೆ ಎಂದು ವಸಂತಿ ಶೆಟ್ಟಿ, ಮುಲ್ಕಿ ಪೊಲೀಸರಿಗೆ ನೀಡುವ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News