×
Ad

ಮುಲ್ಕಿ: ತುಳುವೆರೆ ತುಡರ ಪರ್ಬ ಕಾರ್ಯಕ್ರಮ

Update: 2023-11-11 19:38 IST

ಮುಲ್ಕಿ: ಯುವವಾಹಿನಿಯ ಘಟಕದ ಆಶ್ರಯದಲ್ಲಿ ತುಳುವೆರೆ ತುಡರ ಪರ್ಬ ಕಾರ್ಯಕ್ರಮ ಶನಿವಾರ ಸಂಜೆ ಮುಲ್ಕಿ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾ ಗೃಹದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಮುಲ್ಕಿ ಘಟಕದ ಅಧ್ಯಕ್ಷ ಮಾದವ ಪೂಜಾರಿ ಕಿಲ್ಪಾಡಿ ವಹಿಸಿದ್ದರು.

ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ಬಿ.ಉದ್ಘಾಟಿಸಿ ಮಾತನಾಡಿ ಮುಲ್ಕಿ ಯುವ ವಾಹಿನಿ ಘಟಕದಿಂದ ಸರ್ವ ಸುಕೇಶ್ ಥರ್ಮಿಯರ ಮೂಲಕ ತುಳು ಸಂಪ್ರದಾಯದ ಕಾರ್ಯಕ್ರಮಗಳು ನಡೆಯುತ್ತಿದ್ದು ಯುವ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಲಿ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪುರೋಹಿತ ಮಹೇಶ್ ಶಾಂತಿ ಹೆಜಮಾಡಿ,ಮುಲ್ಕಿ ಶಾಂಭವಿ ಜೇಸಿಸ್ ಟ್ರಸ್ಟ್ ನ ಅಧ್ಯಕ್ಷ ಮೊಹಮ್ಮದ್‌ ಹಬಿಬುಲ್ಲ, ಉದ್ಯಮಿ ಜೋನ್ ಕ್ವಾಡ್ರಸ್,ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ, ಯುವವಾಹಿನಿ ಸಂಸ್ಥೆಯ ಕಾರ್ಯದರ್ಶಿ ವಿನಯ ವಿಶ್ವನಾಥ್, ಸವಿತಾ ಪ್ರಭಾಕರ್, ಶಕೀಲಾ ಹರೀoದ್ರ, ಮೋಹನ್ ಸುವರ್ಣ ಉದಯ ಅಮೀನ್ ಮಟ್ಟು,ಸತೀಶ್ ಕಿಲ್ಪಾಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕ ಬಾಲಚಂದ್ರ ಸನಿಲ್ ರವರಿಗೆ ಪರ್ಬದ ತಮ್ಮನ ನೀಡಿ ಗೌರವಿಸಲಾಯಿತು.

ತುಳುವೆರೆ ತುಡಾರ ಪರ್ಬದ ಅಂಗವಾಗಿ ಗೋ ಪೂಜೆ, ಬಲೀಂದ್ರ ಪೂಜೆ ನಡೆಯಿತು. ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ,ಗಟ್ಟಿ ಬಜಿಲ್ದ ತಮ್ಮನ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಮೊದಲು ಸಾರ್ವಜನಿಕರಿಗೆ ಗೂಡು ದೀಪ ಸ್ಪರ್ಧೆ, ರಂಗೋಲಿ ಸ್ಪರ್ಧೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News