ರಾಮಕೃಷ್ಣ ಮಠದಲ್ಲಿ ‘ರಜತಾಭಿನಂದನೆ’ ಕಾರ್ಯಕ್ರಮ
ಮಂಗಳೂರು : ನಗರದ ಮಂಗಳಾದೇವಿಯ ರಾಮಕೃಷ್ಣ ಮಠದ ಸಹಯೋಗದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಟ್ರಸ್ಟಿನ ಆಶ್ರಯದಲ್ಲಿ ಉಡುಪಿ ಮತ್ತು ದ.ಕ.ಜಿಲ್ಲೆಯ ಯೋಗ ಗುರುಗಳಿಗೆ ‘ರಜತಾಭಿನಂದನೆ’ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸ್ವಾಮಿಜಿತಕಾಮಾನಂದ ಮಹಾರಾಜ್ ಅಶೀರ್ವಚನ ನೀಡಿದರು. ಅತಿಥಿಯಾಗಿ ಭಾಗವಹಿಸಿದ್ದ ಆಯುಷ್ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಇಕ್ಬಾಲ್, ಡಾ.ಸುರೇಶ್ ದೇಲಂಪಾಡಿ ಮಾತನಾಡಿದರು.
ಕರುಣಾಕರ ಉಪಾಧ್ಯಾಯ, ಆನಂದ ಶೆಟ್ಟಿ, ಸತ್ಯನಾರಾಯಣ ಪ್ರಸಾದ್, ಬಿ.ಕಿರಣ್ ಕುಮಾರ್, ಹೆಚ್.ಎಸ್.ಶಿವರಾಯ, ಡಾ.ಕೆ.ಕೃಷ್ಣ ಶರ್ಮ, ಡಾ.ಗಣೇಶ್ ಭಟ್, ಕುಂಬ್ಳೇಕರ್ ಮೋಹನ್ ಕುಮಾರ್, ರಾಜಮಣಿ ರಾಮಕುಂಜ, ಪೂವಪ್ಪ, ಎಂ.ಕೃಷ್ಣ ಭಟ್, ಎಲ್. ರೇಗೊ, ಡಾ.ಐ. ಶಶಿಕಾಂತ್ ಜೈನ್, ರಾಮಣ್ಣರೈ, ಎಂ. ಸಂಜೀವ ಪಿ, ರಾಧಾಕೃಷ್ಣ ಶೆಟ್ಟಿ, ಡಾ.ಮಾಲತಿ ಪೈ, ಕೆ.ಎಸ್. ಪ್ರತಿಮ್ ಕುಮಾರ್, ಸತ್ಯಭಾಮಾ ಭಟ್, ಎಂ. ಸಂಜೀವ ಮೊಗವೀರ, ಬಿ. ಶ್ರೀಧರ, ಅಶೋಕ್ ಕುಮಾರ್ ಕೆ, ಪಿ. ವೇಣುಗೋಪಾಲ್ ಭಟ್, ಶೇಖರ ಕಡ್ತಲ, ಅಶೋಕ ಸಿ. ಪೂಜಾರಿ, ಜಯಶ್ರೀ, ಕೆ. ನರೇಂದ್ರ ಕಾಮತ್, ಎಸ್. ನಿತ್ಯಾನಂದ ಪೈ, ಶಂಕರ ನಾಯ್ಕ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ದೇಲಂಪಾಡಿ, ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಅರುಣಾ ಕಾಮತ್, ಉಪನ್ಯಾಸಕ ಡಾ. ಮಹೇಶ್ ಉಪಸ್ಥಿತರಿದ್ದರು. ವೀಣಾ ಪ್ರಾರ್ಥಿಸಿದರು. ಡಾ. ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.