ಕರ್ನಾಟಕ ಸಲಫಿ ಅಸೋಸಿಯೇಷನ್ ಮಂಗಳೂರು ಘಟಕ ಸಭೆ
Update: 2023-12-03 19:15 IST
ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಷನ್ (ರಿ), ಮಂಗಳೂರು ಇದರ ಘಟಕ ನಾಯಕರ ಸಭೆಯು ಇಂದು ಬೆಳಿಗ್ಗೆ ಪಂಪ್'ವೆಲ್'ನ ಹಿರಾ ಇಂಟರ್ ನ್ಯಾಶನಲ್ ಹೋಟೆಲಿನಲ್ಲಿ ಜರಗಿತು.
ಸಭೆಯನ್ನು ಶೈಖ್ ತಾರಿಖ್ ಸಫಿಯುರಹ್ಮಾನ್ ಮುಬಾರಕ್'ಪುರಿಯವರು ಉದ್ಘಾಟಿಸಿದರು. ಕೆ ಎಸ್ ಎ ಸಲಹಾ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಇಜಾಝ್ ಸ್ವಲಾಹಿ ದಅವತಿನ ಪ್ರಾದೇಶಿಕ ಚರಿತ್ರೆಯನ್ನು ವಿವರಿಸಿದರು. ಮೌಲವಿ ಅಬ್ದುಲ್ ಮಲಿಕ್ ಸಲಫಿ ದಅವತಿನ ಪ್ರಾಮುಖ್ಯತೆಯನ್ನು ವಿವರಿಸಿದರು.
ಕೆಎಸ್ಎ ಅಧ್ಯಕ್ಷರಾದ ಡಾ. ಮುಹಮ್ಮದ್ ಹಫೀಝ್ ಸ್ವಲಾಹಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಎಸ್ಎ ಪ್ರಧಾನ ಕಾರ್ಯದರ್ಶಿ ಯಾಸಿರ್ ಅಲ್ ಹಿಕಮಿ ಕಾರ್ಯಕ್ರಮ ನಿರೂಪಿಸಿದರು. ಕೆಎಸ್ಎ ಕೋಶಾಧಿಕಾರಿ ಸಯ್ಯದ್ ಶಾಝ್ ಮತ್ತು ಅಲ್ ಬಯಾನ್ ಅರೆಬಿಕ್ ಕಾಲೇಜಿನ ಅಧ್ಯಕ್ಷ ಅಶ್ಪಾಕ್ ವೇದಿಕೆಯಲ್ಲಿದ್ದರು ಎಂದು ಯಾಸಿರ್ ಅಲ್ ಹಿಕಮಿ ತಿಳಿಸಿದ್ದಾರೆ.