×
Ad

ಕೃಷ್ಣಾಪುರ ಎ.ಎಂ.ಎ. ಓಲ್ಡ್ ಸ್ಟೂಡೆಂಟ್ ಅಸೋಸಿಯೇಷನ್ ವತಿಯಿಂದ ವಿಕಲಚೇತನರ ದಿನಾಚರಣೆ

Update: 2023-12-03 21:59 IST

ಸುರತ್ಕಲ್, ಡಿ.3: ಕೃಷ್ಣಾಪುರ ಎಂಟನೇ ಎ ಬ್ಲಾಕ್ ಎ.ಎಂ.ಎ. ಓಲ್ಡ್ ಸ್ಟೂಡೆಂಟ್ ಅಸೋಸಿಯೇಷನ್ ವತಿಯಿಂದ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಅಲ್ ಹುದಾ ಮಸೀದಿ ವಠಾರದಲ್ಲಿ ದ್ವಿಚಕ್ರ ವಾಹನ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಆಲ್ ಹುದಾ ಜುಮಾ ಮಸೀದಿ ಖತೀಬ್ ಮುಹಮ್ಮದ್ ಮುಸ್ತಫಾ ಅಝ್ಅರಿ ಅವರು, ಎ.ಎಂ.ಎ ಓಲ್ಡ್ ಸ್ಟೂಡೆಂಟ್ ಅಸೋಸಿಯೇಷನ್ ಅನೇಕ ಮಾನವೀಯತೆ ಸೇವೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಜಾತಿ ಧರ್ಮಗಳನ್ನು ಮೀರಿ ಮಾನವೀಯ ನೆಲೆಗಟ್ಟಿನಲ್ಲಿ ಇಂದಿಗೂ ಪ್ರಚಾರ ಬಯಸದೆ ಸೇವೆ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಇದೇ ವೇಳೆ ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಅಂಗ ವೈಫಲ್ಯ ಸಮಸ್ಯೆ ಎದುರಿಸುತ್ತಿರುವ ಅಬ್ದುಲ್ ರೆಹಮಾನ್ ಅವರಿಗೆ ದ್ವಿಚಕ್ರ ವಾಹನಕ್ಕೆ ನೆರವಾಗುವ ಚಕ್ರಗಳನ್ನು ಅಳವಡಿಸಿ ವೀಲ್ ಬೇಸ್ ಸ್ಕೂಟರನ್ನು ಸಂಘಟನೆಯ ಅಧ್ಯಕ್ಷ ಟಿ. ಮೋಹಿದ್ದಿನ್ ವಿತರಿಸಿದರು.

ಸಂಘಟನೆಯ ಉಪಾಧ್ಯಕ್ಷ ಅಬ್ದುಲ್ ರಿಯಾಝ್, ಕೋಶಾಧಿಕಾರಿ ಮಹಮ್ಮದ್ ಕಬೀರ್, ಕಾರ್ಯದರ್ಶಿ ಅಹ್ಮದ್ ಕಬೀರ್, ಉಪ ಕಾರ್ಯದರ್ಶಿ ಅಬೂಬಕರ್ ಸಿದ್ದಿಕ್(ಟೀವಿಸ್), ಗ್ರೀನ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್, ಅಬ್ದುಲ್ ರೆಹಮಾನ್, ಮುಹಮ್ಮದ್ ಇಕ್ಬಾಲ್, ಅಬ್ದುಲ್ ಸತ್ತಾರ್, ನೌಫಾಲ್, ಮುಹಮದ್ ಶಫಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News