×
Ad

ಬಿಜೆಪಿ ಗೆಲುವು ಆತಂಕಕಾರಿ: ಸಿಪಿಐ

Update: 2023-12-04 20:57 IST

ಮಂಗಳೂರು, ಡಿ.4: ಉತ್ತರ ಭಾರತದ ನಾಲ್ಕು ರಾಜ್ಯಗಳ ಚುನಾವಣೆಯ ಪೈಕಿ ಮೂರರಲ್ಲಿ ಬಿಜೆಪಿ ಗೆಲುವು ಸಾಧಿಸಿರು ವುದು ಆತಂಕಕಾರಿಯಾಗಿದೆ ಎಂದು ಸಿಪಿಐ ದ.ಕ.ಜಿಲ್ಲಾ ಕಾರ್ಯದರ್ಶಿ ಶೇಖರ್ ಬಿ. ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿರೋಧ ಪಕ್ಷಗಳು ಇನ್ನಾದರೂ ಒಟ್ಟಾಗಿ ಚುನಾವಣೆ ಎದುರಿಸದಿದ್ದರೆ ಆಗುವ ಪರಿಣಾಮಗಳ ಮುನ್ಸೂಚನೆ ಇದಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಜಯಗಳಿಸಿರುವುದು ಮತ್ತು ಚತ್ತೀಸ್‌ಗಡ ರಾಜ್ಯದ ಕೋಂಟ ಮತ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿ ಮನೀಷ್ ಕುಂಜಮ್, ತೆಲಂಗಾಣ ರಾಜ್ಯದ ಸಿಪಿಐ ಕಾರ್ಯದರ್ಶಿ ಕೆ. ಸಾಂಬಶಿವ ರಾವ್ ಕೊಟ್ಟಾಗುಡೆಮ್ ಕ್ಷೇತ್ರದಿಂದ ಗೆದ್ದಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News