×
Ad

ಶಕ್ತಿನಗರದ ಯುವಕ ನಾಪತ್ತೆ

Update: 2023-12-04 21:15 IST

ಮಂಗಳೂರು, ಡಿ.4: ಶಕ್ತಿನಗರದ ಪ್ರಶಾಂತಿನಗರ ನಿವಾಸಿ ಪ್ರಣಾಮ್ (30) ಎಂಬವರು ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ನನ್ನ ಮಗ ಪ್ರಣಾಮ್ (30) ಮೂರು ವರ್ಷಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು, ಅ.27ರಿಂದ ನಾಪತ್ತೆಯಾಗಿದ್ದಾನೆ. 5.6 ಅಡಿ ಎತ್ತರವಿರುವ ಈತ ಕೋಲುಮುಖ ಹಾಗೂ ಎಣ್ಣೆ ಕಪ್ಪು ಬಣ್ಣವನ್ನು ಹೊಂದಿದ್ದಾನೆ. ಕನ್ನಡ, ತುಳು ಭಾಷೆ ಮಾತನಾ ಡುತ್ತಾನೆ ಎಂದು ಪದವು ಬಿಕರ್ನಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕಿಯೂ ಆಗಿರುವ ಆತನ ಉಮಾವತಿ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News