×
Ad

ಜಾರಂದಗುಡ್ಡೆ: ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣೆ ಶಿಬಿರ

Update: 2023-12-09 12:37 IST

ಬಂಟ್ವಾಳ, ಡಿ.9: ಮಾನವನ ದೇಹದಲ್ಲಿ ಕಣ್ಣು ಅತೀ ಮುಖ್ಯ ಹಾಗೂ ಅತೀ ಸೂಕ್ಷ್ಮ ಅಂಗವಾಗಿದ್ದು ಕಣ್ಣಿನ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ವೆನ್ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಡಾ.ಅನಿಲ್ ರಾಮಾನುಜಂ ಹೇಳಿದ್ದಾರೆ.

ರೋಟರಿ ಕ್ಲಬ್ ಮೊಡಂಕಾಪು, ದ.ಕ. ಜಿಲ್ಲಾ ಸಂಚಾರಿ ನೇತ್ರ ಘಟಕ ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಪುದು, ಕಳ್ಳಿಗೆ ಗ್ರಾಪಂ, ಲಕ್ಷ್ಮೀ ವಿಷ್ಣು ಸೇವಾ ಸಂಘ ಜಾರಂದಗುಡ್ಡೆ, ಸೀನಿಯರ್ ಛೇಂಬರ್ ಬಿ.ಸಿ.ರೋಡ್ (ಬಂಟ್ವಾಳ ನೇತ್ರಾವತಿ ಸಂಗಮ) ಇವುಗಳ ಜಂಟಿ ಆಶ್ರಯದಲ್ಲಿ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಶುಕ್ರವಾರ ನಡೆದ ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಮನೋಹರ್ ರೈ ಮಾಣಿ ಮಾತನಾಡಿ, ಗ್ರಾಮೀಣ ಮಟ್ಟದ ಜನರಿಗೆ ಕಣ್ಣಿನ ಆರೋಗ್ಯದ ಬಗ್ಗೆ ಸರಿಯಾದ ಅರಿವು ಇರುವುದಿಲ್ಲ. ಕಣ್ಣಿಗೆ ಸಂಬಂಧಿಸಿದ ಸಣ್ಣ ಪುಟ್ಟ ಸಮಸ್ಯೆಯನ್ನು ನಿರ್ಲಕ್ಷಿಸಿ ಬಳಿಕ ಅದು ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತದೆ. ಇದನ್ನು ಮನಗಂಡು ರೋಟರಿ ಕ್ಲಬ್ ಮೊಡಂಕಾಪು, ಲಕ್ಷ್ಮಿ ವಿಷ್ಣು ಸೇವಾ ಸಂಘ ಜಾರಂದಗುಡ್ಡೆ ಸಹಿತ ಎಲ್ಲಾ ಸಂಘ ಸಂಸ್ಥೆಗಳು ಒಟ್ಟು ಸೇರಿ ಗ್ರಾಮೀಣ ಭಾಗದಲ್ಲಿ ಕಣ್ಣು ತಪಾಸನಾ ಶಿಬಿರ ನಡೆಸುತ್ತಿರುವುದು ಉತ್ತಮ ಕಾರ್ಯ. ಇಂಥಹ ಉತ್ತಮ ಕಾರ್ಯಗಳು ಸಮಾಜದಲ್ಲಿ ಇನ್ನಷ್ಟು ನಡೆಯಲಿ ಎಂದರು.

ರೋಟರಿ ಅಧ್ಯಕ್ಷ ಪಿ.ಎ.ರಹೀಂ ಅದ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಅರುಣ್ ಶರ್ಮ ಪನ್ನಡ್ಕ, ದಿನಕರ್ ಬಂಜನ್ ಬರೆ, ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಸಾಮಾಜಿಕ ಕಾರ್ಯಕರ್ತ ಶಶಿಪ್ರಭ ಗುತ್ತಹಿತ್ತಿಲು, ರೋಟರಿ ಕ್ಲಬ್ ಮೊಡಂಕಾಪು ಇದರ ಕಾರ್ಯದರ್ಶಿ ಅಲೆಕ್ಸಾಂಡರ್ ಲೋಬೊ, ಸೀನಿಯರ್ ಚೇಂಬರ್ ಉಪಾಧ್ಯಕ್ಷ ಡಾ.ಆಧಿರಾಜ್ ಜೈ,ನ್, ಸೀನಿಯರ್ ಚೇಂಬರ್ ಕೋಶಾಧಿಕಾರಿ ಸತ್ಯನಾರಾಯಣ ರಾವ್, ಗ್ರಾಪಂ ಸದಸ್ಯ ಮನೋಜ್ ವಳವೂರು, ವೆನ್ಲಾಕ್ ನೇತ್ರ ತಜ್ಞ ಡಾ.ಪ್ರೇರಣಾ, ಪಿಡಿಒ ಚಂದ್ರಾವತಿ, ಲಕ್ಷ್ಮೀ ವಿಷ್ಣು ಸಂಘದ ಅಧ್ಯಕ್ಷ ಸುಧೀಂದ್ರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಅಲೆಕ್ಸಾಂಡರ್ ಲೋಬೊ ಸೇರಿದಂತೆ 15 ಮಂದಿ ಮರಣಾನಂತರ ದೇಹದಾನ ಮಾಡುವುದಾಗಿ ಘೋಷಿಸಿದರು. ಶಿಬಿರದಲ್ಲಿ 118 ಫಲಾನುಭವಿಗಳಿದ್ದು, 65 ಅರ್ಹರಿಗೆ ಕನ್ನಡಕಗಳನ್ನು ವಿತರಿಸಲಾಯಿತು. 16 ಜನರಿಗೆ ಕ್ಯಾಂಟ್ಯಾಕ್ಟ್ (ಕಣ್ಣಿನ ಪೊರೆ) ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ಸೀನಿಯರ್ ಚೇಂಬರ್ ಅಧ್ಯಕ್ಷ ಡಾ.ಆನಂದ್ ಬಂಜನ್ ಸ್ವಾಗತಿಸಿದರು. ಸುಧೀರ್ ಜಾರಂದಗುಡ್ಡೆ ವಂದಿಸಿದರು. ಸೀನಿಯರ್ ಚೇಂಬರ್ ಸ್ಥಾಪಕಾಧ್ಯಕ್ಷ ಜಯಾನಂದ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News