ಇ- ಆಸ್ತಿ ಆನ್‌ಲೈನ್‌ನಲ್ಲಿ ಖಾತಾ ನೋಂದಣಿ; ಮಧ್ಯವರ್ತಿಗಳ ಅಗತ್ಯವಿಲ್ಲ: ಪಾಲಿಕೆ ಆಯುಕ್ತರು
ಮಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಖಾತೆಗಳನ್ನು ಇ- ಆಸ್ತಿ ಆನ್‌ಲೈನ್ ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಪ್ರಸ್ತುತ ಆನ್‌ಲೈನ್ ವ್ಯವಸ್ಥೆಯಡಿ ಖಾತಾ ನೋಂದಣಿ ಹಾಗೂ ವರ್ಗಾವಣೆ ಕೋರಿ ಅರ್ಜಿಗಳನ್ನು ಸರಳವಾಗಿ ನಾಗರಿಕರು ಸಲ್ಲಿಸಬಹುದು. ಮಧ್ಯವರ್ತಿಗಳ ಸಹಾಯ ಪಡೆಯುವ ಅಗತ್ಯವಿಲ್ಲ ಎಂದು ಮನಪಾ ಆಯುಕ್ತರ ಪ್ರಕಟನೆ ತಿಳಿಸಿದೆ.
ನೋಂದಣಿ ಹೇಗೆ?
ಇ ಆಸ್ತಿ ತಂತ್ರಾಂಶದ ಮೂಲಕ ನಾಗರಿಕರು ಆಸ್ತಿಗಳ ಖಾತೆ ನೊಂದಾವಣೆ ಅಥವಾ ವರ್ಗಾವಣೆ ಅರ್ಜಿಸಲ್ಲಿಸಲು KSRSAC ಯಿಂದ ಅಭಿವೃದ್ಧಿ ಪಡಿಸಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಸಿಗುವ ವೆಬ್‌ಸೈಟ್ ಬಳಸಿಕೊಂಡು ಮೊಬೈಲ್ ನಂಬ್ರದ ಮೂಲಕ ನೋಂದಾಯಿಸಿಕೊಳ್ಳಬಹುದು. ಸ್ಕ್ಯಾನ್ ಮಾಡಿ ವೆಬ್‌ಸೈಟ್‌ನಲ್ಲಿ ಮೊಬೈಲ್ ನಂಬ್ರ ಹಾಕಿದಾಗ ಜಿಐಎಸ್ ಮ್ಯಾಪ್ ತೆರೆದುಕೊಳ್ಳುತ್ತದೆ. ತಮ್ಮ ಆಸ್ತಿಯ ಬಳಿ ಜಿಐಎಸ್ ಮ್ಯಾಪ್ ತೆರೆದಾಗ ಆಸ್ತಿಯ ಸ್ಥಳದ ಗುರುತು ಸೆರೆಹಿಡಿದು ವಿವರಗಳನ್ನು ದಾಖಲಿಸಬಹುದು.
ದಾಖಲಿಸಿದ ವಿವರಗಳು ಇ- ಆಸ್ತಿ ತಂತ್ರಾಂಶಕ್ಕೆ ವರ್ಗಾವಣೆಯಾಗುತ್ತದೆ. (eaasthi.karnataka.gov.in
ಅರ್ಜಿದಾರರು ಆಸ್ತಿಯ ವಿವರ, ಮಾಲಕರ ವಿವರ (ಭಾವಚಿತ್ರ ಹಾಗೂ ಗುರುತಿನ ಚೀಟಿ ಸಹಿತ), ಕಟ್ಟಡದ ವಿವರಗಳು, ಋಣಗಳ ವಿವರ, ಹಕ್ಕಿನ ವಿವರ, ದಸ್ತಾವೇಜಿನ ವಿವರಗಳು (ದಸ್ತಾವೇಜಿನ ಮತ್ತು ಇತರೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದು). ಅನುಮೋದನೆಯಾದ ಬಳಿಕ ಅರ್ಜಿದಾರರಿಗೆ ಮೊಬೈಲ್‌ಸಂದೇಶ ದೊರೆಯುತ್ತದೆ. ಅರ್ಜಿದಾರರು ಇ ಆಸ್ತಿ ವೆಬ್‌ಸೈಟ್ ಮೂಲಕ ಮನಪಾ ಕಂದಾಯ ಶಾಖೆಯಿಂದ ಅಥವಾ ಮಂಗಳೂರು ವನ್ ಸೇವಾ ಕೇಂದ್ರದಿಂದ ಪ್ರತಿಯನ್ನು ಪಡೆಯಬಹುದು.
ಹೆಚ್ಚಿನ ವಿವರಗಳಿಗೆ ಕೇಂದ್ರ ವಲಯ ಕಚೇರಿ 9141047964, ಸುರತ್ಕಲ್ ವಲಯ ಕಚೇರಿ- 9141047965, ಕದ್ರಿ ಮಲ್ಲಿಕಟ್ಟ ವಲಯಕಚೇರಿ 9141047966 ನ್ನು ಸಂಪರ್ಕಿಸಬಹುದು ಎಂದು ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.