×
Ad

ಆಸ್ಪತ್ರೆಯಲ್ಲಿ ದಾಂಧಲೆ: ಪ್ರಕರಣ ದಾಖಲು

Update: 2023-12-15 19:28 IST

ಮಂಗಳೂರು : ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ವ್ಯಕ್ತಿಯೊಬ್ಬ ದಾಂಧಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಉಳ್ಳಾಲ ಮುಕ್ಕಚ್ಚೇರಿಯ ಅಬ್ದುಲ್ ಜಬ್ಬಾರ್ ಡಿ.5ರ ಮುಂಜಾವ 2:25ಕ್ಕೆ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಆಸ್ಪತ್ರೆಯ ರಿಸೆಪ್ಷನ್ ಕಚೇರಿಗೆ ಅಳವಡಿಸಿದ ಗಾಜನ್ನು ಒಡೆದು ಹಾಕಿ ಆಸ್ಪತ್ರೆಗೆ ಸುಮಾರು 15,000 ರೂ. ನಷ್ಟ ಉಂಟು ಮಾಡಿರುವುದಾಗಿ ಆಸ್ಪತ್ರೆಯ ಎಚ್‌ರ್ ಎಕ್ಸಿಕ್ಯೂಟಿವ್ ಗಣೇಶ್ ಎಂಬವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಡಿ.4ರಂದು ಉಳ್ಳಾಲ ಮುಕ್ಕಚ್ಚೇರಿಯ ನೌಫಾಲ್‌ರನ್ನು ಅವರ ಸಂಬಂಧಿಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿ.5ರ ಮುಂಜಾವ 2:20ಕ್ಕೆ ಅವರು ಮೃತಪಟ್ಟಿದ್ದರು. ಈ ವಿಚಾರದಲ್ಲಿ ಮೃತ ನೌಫಾಲ್‌ರ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿಯ ಜೊತೆ ಮಾತುಕತೆ ನಡೆಸುವಾಗ ಆ ಗುಂಪಿನಲ್ಲಿದ್ದ ಅಬ್ದುಲ್ ಜಬ್ಬಾರ್ ದಾಂಧಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News