×
Ad

ಬಿ.ಸಿ.ರೋಡ್‌ನಲ್ಲಿ ಸೀರತ್ ಸಮಾವೇಶ

Update: 2023-12-16 20:47 IST

ಮಂಗಳೂರು, ಡಿ.16: ಯುನಿವೆಫ್ ಕರ್ನಾಟಕವು ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಪ್ರಯುಕ್ತ ಬಿ.ಸಿ. ರೋಡ್‌ನ ಪೂಂಜಾ ಗ್ರೌಂಡ್‌ನಲ್ಲಿ ಸೀರತ್ ಸಮಾವೇಶ ಜರಗಿತು.

ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ‘ಪ್ರವಾದಿ ಹಃ ಮುಹಮ್ಮದ್ (ಸ) ರ ಮಾದರಿ ಜೀವನ’ ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಿದರು. ಜಿಪಂ ಮಾಜಿ ಉಪಾಧ್ಯಕ್ಷೆ ಎಂ.ಎಸ್.ಮುಹಮ್ಮದ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಪೂರ್ವ ವಲಯಾಧ್ಯಕ್ಷ ಬಿ.ಎಂ.ಬದ್ರುದ್ದೀನ್, ಸ್ಥಳೀಯರಾದ ಅಬ್ದುಲ್ ರಹ್ಮಾನ್, ಬಂಟ್ವಾಳ ಶಾಖಾಧ್ಯಕ್ಷ ಅಶ್ರಫ್ ಫರಂಗಿಪೇಟೆ ಉಪಸ್ಥಿತರಿದ್ದರು.

ಅಭಿಯಾನದ ಸಂಚಾಲಕ ಸೈಫುದ್ದೀನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಮರ್ ಮುಖ್ತಾರ್ ಕಿರಾಅತ್ ಪಠಿಸಿದರು.

ಮುಹಮ್ಮದ್ ಆಸಿಫ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News