×
Ad

ಕೊಡಾಜೆ: ಸಮಸ್ತದ ಅಗಲಿದ ನೇತಾರರ ಅನುಸ್ಮರಣೆ, ಮತ ಪ್ರವಚನ ಕಾರ್ಯಕ್ರಮ

Update: 2023-12-17 14:34 IST

ಬಂಟ್ವಾಳ, ಡಿ.17: ಕೊಡಾಜೆ ಹಾಗೂ ನೇರಳಕಟ್ಟೆ ಶಾಖಾ ಎಸ್ಕೆಎಸ್ಸೆಸ್ಸೆಫ್ ಇದರ 6ನೇ ವಾರ್ಷಿಕೋತ್ಸವದ ಅಂಗವಾಗಿ ಸಮಸ್ತದ ಅಗಲಿದ ನೇತಾರರ ಅನುಸ್ಮರಣೆ, ಮತ ಪ್ರವಚನ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಶನಿವಾರ ಕೊಡಾಜೆಯ ತರ್ಬಿಯತುಲ್ ಇಸ್ಲಾಂ ಮದ್ರಸ ವಠಾರದ ಶೈಖುನಾ ಮಿತ್ತಬೈಲು ಉಸ್ತಾದ್ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸೈಯದ್ ಅಲಿ ತಂಙಳ್ ಕುಂಬೋಳ್ ಮಾತನಾಡಿ, ಸಮಸ್ತ ನಡೆದು ಬಂದ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.

ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಶಾದ್ ದಾರಿಮಿ ಅಲ್ ಜಝರಿ ಮಿತ್ತಬೈಲು ದುಆ ನೆರವೇರಿಸಿದರು. ಕೊಡಾಜೆ ಹಾಗೂ ನೇರಳಕಟ್ಟೆ ಎಸ್ಕೆಎಸ್ಸೆಸ್ಸೆಫ್ ಶಾಖಾದ್ಯಕ್ಷ ಹನೀಫ್ ಅನಂತಾಡಿ ಅಧ್ಯಕ್ಷತೆ ವಹಿಸಿದ್ದರು.

ವಳಚ್ಚಿಲ್ ಮಸೀದಿ ಖತೀಬ್ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮುಖ್ಯ ಭಾಷಣಗೈದರು. ಕೊಡಾಜೆ ಬಿಜೆಎಂ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಪ್ರಸ್ತಾವನೆಗೈದರು.

ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹೀಂ ರಾಜ್ ಕಮಲ್ ಧ್ವಜಾರೋಹಣ ನೆರವೇರಿಸಿದರು.

ಬಿಜೆಎಂ ಉಪಾಧ್ಯಕ್ಷ ನೌಫಲ್ ಅಶ್ರಫ್ ಹಾಜಿ, ಕೊಡಾಜೆ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ರಫೀಕ್ ಹಾಜಿ ಸುಲ್ತಾನ್, ಉಪಾಧ್ಯಕ್ಷ ಉಮರ್ ಹಾಜಿ ರಾಜ್ ಕಮಲ್, ಮಸೀದಿ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಫಾರೂಕ್ ಹಾಜಿ ಸುಲ್ತಾನ್, ಬಿಜೆಎಂ ಕಾರ್ಯದರ್ಶಿ ನವಾಝ್ ಭಗವಂತಕೋಡಿ, ಎಸ್ಕೆಎಸ್ಸೆಸ್ಸೆಫ್ ಮಾಣಿ ವಲಯಾಧ್ಯಕ್ಷ ಜಮಾಲ್ ಕೋಡಪದವು, ಕೋಶಾಧಿಕಾರಿ ಇಬ್ರಾಹೀಂ ಹಾಜಿ ಪಂತಡ್ಕ, ಕ್ಲಸ್ಟರ್ ಅದ್ಯಕ್ಷ ಇಲ್ಯಾಸ್ ನೇರಳಕಟ್ಟೆ, ತರ್ಬಿಯತುಲ್ ಇಸ್ಲಾಂ ಮದ್ರಸ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಂಝ ನೆಡ್ಯಾಲು, ಮದ್ರಸ ಮುಖ್ಯ ಶಿಕ್ಷಕ ಪಿ.ಎ.ಝಕರಿಯ ಅಸ್ಲಮಿ ಮರ್ದಾಳ, ಪರ್ಲೊಟ್ಟು ಖತೀಬ್ ಸೈದಾಲಿ ಮುಸ್ಲಿಯಾರ್, ಕೊಡಾಜೆ ಹಾಗೂ ನೇರಳಕಟ್ಟೆ ಶಾಖಾ ಎಸ್ಕೆಎಸ್ಸೆಸ್ಸೆಫ್ ಉಪಾಧ್ಯಕ್ಷ ಮಸೂದ್ ಹಾಜಿ ಕೊಡಾಜೆ, ಕಾರ್ಯದರ್ಶಿ ಅಝೀಝ್ ನೇರಳಕಟ್ಟೆ, ಕೋಶಾಧಿಕಾರಿ ಮಹಮ್ಮದ್ ನೌಫಲ್ ಕೊಡಾಜೆ, ಜೊತೆ ಕಾರ್ಯದರ್ಶಿ ಝಾಕಿರ್ ಹುಸೈನ್ ಪಂತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇವೇಳೆ 2024ರ ಜನವರಿ 28ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಸ್ತ ಶತಮಾನೋತ್ಸವದ ಉದ್ಘಾಟನಾ ಮಹಾ ಸಮ್ಮೇಳನ ಹಾಗೂ ಕುಂಬ್ರ ಕೆಐಸಿಯಲ್ಲಿ ಡಿ.21ರಿಂದ 25ರ ತನಕ ನಡೆಯಲಿರುವ ಸನದುದಾನ ಸಮ್ಮೇಳನದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಪಾಂಡವರಕಲ್ಲು ಖತೀಬ್ ಅಬ್ದುರ್ರಹ್ಮಾನ್ ಫೈಝಿ ಸ್ವಾಗತಿಸಿದರು.

ಕ್ಯಾಂಪಸ್ ಉಸ್ತುವಾರಿ ಸಫ್ವಾನ್ ಕೊಡಾಜೆ ಕಿರಾಅತ್ ಪಠಿಸಿದರು. ತ್ವಲಬಾ ಉಸ್ತುವಾರಿ ಝಬೀರ್ ವಾಫಿ ಅಲ್ ಕೌಸರಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News