ಕೆಬಿಎಂಕೆ ಸುವರ್ಣ ಮಹೋತ್ಸವದ ಅಹ್ವಾನ ಪತ್ರ ಬಿಡುಗಡೆ
Update: 2023-12-21 20:03 IST
ಮಂಗಳೂರು: ಕೊಂಕಣಿ ಭಾಶಾ ಮಂಡಳ್ ಕರ್ನಾಟಕದ ಸುವರ್ಣ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಶಾಸಕ ವೇದವ್ಯಾಸ ಕಾಮತ್ ತನ್ನ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು ಕೊಂಕಣಿ ಭಾಷೆಗೆ ೪೦ಕ್ಕೂ ಹೆಚ್ಚು ಪ್ರಭೇದಗಳು ಇವೆ. ಬಹುತೇಕ ಎಲ್ಲಾ ಧರ್ಮದ ಜನರು ಮಾತನಾಡತ್ತಾರೆ. ನಾಲ್ಕೈದು ಲಿಪಿಯಲ್ಲಿ ಬರೆಯುತ್ತಾರೆ. ಣಿ ಭಾಶಾ ಮಂಡಳ್ ಕರ್ನಾಟಕದ ಸುವರ್ಣ ಮಹೋತ್ಸವವನ್ನು ಜನವರಿ 9ರಂದು ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.ಕೆಬಿಎಂಕೆ ಅಧ್ಯಕ್ಷ ಕೆ. ವಸಂತ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ರೇಮಂಡ್ ಡಿಕುನ್ಹಾ ತಾಕೊಡೆ ವಂದಿಸಿದರು. ಖಜಾಂಚಿ ಸುರೇಶ್ ಶೆಣೈ, ಕಾರ್ಯಕಾರಿ ಸದಸ್ಯ ಡಾ. ಅರವಿಂದ ಶಾನ್‌ಬಾಗ್ ಉಪಸ್ಥಿತರಿದ್ದರು.