×
Ad

ಪತ್ರಕರ್ತ ನಾಗೇಶ್ ಪಡು ಸ್ಮಾರಕ ರಂಗಮಂಟಪ ಉದ್ಘಾಟನೆ

Update: 2023-12-21 20:04 IST

ಅರ್ಕುಳ : ಸಮಾಜ ಸೇವಕ, ಪತ್ರಕರ್ತ ದಿ.ನಾಗೇಶ್ ಪಡು ಸ್ಮಾರಕ ಬಂಟ್ವಾಳ ತಾಲೂಕಿನ ಮೇರಮಜಲಿನ ಪಕ್ಕಳಪಾದೆ ಸರಸ್ವತಿ ನಗರದ ಶ್ರೀ ಸರಸ್ವತಿ ಭಜನಾ ಮಂದಿರದಲ್ಲಿ ನಿರ್ಮಿಸಲಾದ ನೂತನ ರಂಗಮಂಟಪವನ್ನು ಉದ್ಘಾಟಿಸಲಾಯಿತು.

ದಿ.ನಾಗೇಶ್ ಪಡು ಅವರ ಪತ್ನಿ ಜೀವಿತಾ ನಾಗೇಶ್ ರಂಗಮಂಟಪವನ್ನು ಉದ್ಘಾಟಿಸಿದರು. ತುಪ್ಪೆಕಲ್ಲು ಶ್ರೀ ಉಳ್ಳಾಕ್ಲು ಮೃಗಂತಾಯಿ ದೈವಸ್ಥಾನದ ಗಡಿಕಾರ ಸದಾನಂದ ಆಳ್ವ ಕಂಪ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು. ಅತಿಥಿಗಳಾಗಿ ಜಿಲ್ಲಾ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ, ಪ್ರೆಸ್‌ಕ್ಲಬ್ ಕೋಶಾಧಿಕಾರಿ ಪ್ರಸಾದ್ ರೈ, ಪತ್ರಕರ್ತ ವಿಲ್ಫ್ರೆಡ್ ಡಿಸೋಜ, ವಿನಯ್ ಆಳ್ವ ಬೋಳಿಯಾರ್, ಹರೀಶ್ ಇರಾ, ಮೇರಮಜಲು ಗ್ರಾಪಂ ಅಧ್ಯಕ್ಷ ಸತೀಶ್ ನಾಯ್ಕ್, ಹರೀಶ್ ಪೆರ್ಗಡೆ, ಉಮೇಶ್ ಬೆಂಜನಪದವು, ವಸಂತ ಬಡ್ಡೂರು ಉಪಸ್ಥಿತರಿದ್ದರು.

ಧಾರ್ಮಿಕ ರಂಗದ ಸೇವೆಗಾಗಿ ಶಿವಪ್ಪಸುವರ್ಣ ಮತ್ತು ಪೊಲೀಸ್ ಇಲಾಖೆಯಲ್ಲಿ ಸಿಆರ್ ಆಗಿ ಭಡ್ತಿ ಹೊಂದಿದ ಅರುಣ ಕುಮಾರ್ ಪಾದೆಮಾರ್ ಅವರನ್ನು ಸನ್ಮಾನಿಸಲಾಯಿತು. ಮಂದಿರದ ಸದಸ್ಯರಾದ ನಾಗಭೂಷಣ್ ಪ್ರಾರ್ಥಿಸಿದರು. ವಿಶುಕುಮಾರ್ ಸ್ವಾಗತಿಸಿದರು. ವಿಶ್ವನಾಥ್ ಪಕ್ಕಳಪಾದೆ ವಂದಿಸಿದರು. ಉಪನ್ಯಾಸಕ ಡಾ. ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News