×
Ad

ಕಾರ್ಕಳ: ನಮ್ಮ ನಾಡು ಒಕ್ಕೂಟ ಘಟಕದ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

Update: 2023-12-21 20:58 IST

ಶಾಕಿರ್ ಹುಸೈನ್ ಬೈಲೂರು

ಕಾರ್ಕಳ: ನಮ್ಮ ನಾಡು ಒಕ್ಕೂಟ ಕಾರ್ಕಳ ತಾಲೂಕು ಘಟಕದ ಮಹಾಸಭೆ ಹಾಗೂ 2024 ಮತ್ತು 2025ರ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಕಾರ್ಕಳ ತಾಲೂಕಿನ ಕಾರ್ಕಳ ಕಸಬಾ ಗ್ರಾಮದ ಹಂಚಿಕಟ್ಟೆಯ ಎನ್. ಎಸ್ ಅಕಾಡೆಮಿಯ ಸಭಾಂಗಣದಲ್ಲಿ ಜಿಲ್ಲಾ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್ ಬೆಳ್ವೆಯವರ ಅಧ್ಯಕ್ಷತೆಯಲ್ಲಿ ಜರುಗಿತು.

ನೂತನ ಅಧ್ಯಕ್ಷರಾಗಿ ಶೀಶಾ ಹೋಟೆಲ್ ಮಾಲಕ ಶಾಕಿರ್ ಹುಸೈನ್ ಬೈಲೂರು, ಕಾರ್ಯದರ್ಶಿಯಾಗಿ ಶೇಕ್ ಶಬ್ಬೀರ್ ಮಿಯ್ಯಾರು, ಉಪಾಧ್ಯಕ್ಷರಾಗಿ ಮುಸ್ತಫ, ಮುಷ್ತಾಕ್ ಅಹಮದ್, ಮೊಹಮ್ಮದ್ ನವಾಝ್ ಆಯ್ಕೆಯಾಗಿದರು.‌

ಗೌರವ ಅಧ್ಯಕ್ಷರಾಗಿ ಸೈಯದ್ ಹಸನ್ ಆಯ್ಕೆಯಾದರು, ಜೊತೆ ಕಾರ್ಯದರ್ಶಿಯಾಗಿ ರಹೀಂ ತೆಲ್ಲಾರು, ಪತ್ರಿಕಾ ಕಾರ್ಯದರ್ಶಿಯಾಗಿ ಕೆಂ . ಎಂ. ಖಲೀಲ್, ಸಂಘಟನಾ ಕಾರ್ಯದರ್ಶಿಯಾಗಿ ಮೌಲಾನ ಮೊಹಮ್ಮದ್ ಹಫೀಝ್ ಸಾಹೇಬ್, ಯುವ ಘಟಕದ ತಾಲೂಕು ಸಂಯೋಜಕರಾಗಿ ಅಬ್ದುಲ್ಲ ಶೇಕ್ ಆದಂ ಆಯ್ಕೆಯಾದರು.

ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ಅಬ್ದುಲ್ ಖಾದರ್ ಮುಡುಪಾಡಿ, ಮುನಾವರ್ ಅಜೆಕಾರು ಪಳ್ಳಿ, ಉಸ್ಮಾನ್ ಗುಲ್ವಾಡಿ, ಚುನಾವಣೆ ವೀಕ್ಷಕರಾಗಿ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News