×
Ad

ಸ್ನೇಹಾಲಯದಲ್ಲಿ ಕ್ರಿಸ್ಮಸ್ ಆಚರಣೆ

Update: 2023-12-23 19:09 IST

ಮಂಜೇಶ್ವರ, ಡಿ.23: ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಸಂಸ್ಥೆಯಾದ ‘ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರ’ದಲ್ಲಿ ಇತ್ತೀಚೆಗೆ ಕ್ರಿಸ್ಮಸ್ ಆಚರಿಸಲಾಯಿತು.

ಕ್ರಿಸ್ಮಸ್ ಕ್ಯಾರೋಲ್‌ಗಳಿಗೆ ಹೆಸರುವಾಸಿಯಾದ ತಂಡ ಜಿಜಿ 100ರಿಂದ ಕ್ರಿಸ್ಮಸ್ ಗೀತೆಗಳನ್ನು ಸಾದರಪಡಿಸಲಾಯಿತು. ಅರ್ಬನ್ ಗ್ರೂವ್ ಆಕರ್ಷಕ ನೃತ್ಯ ಪ್ರದರ್ಶನಗಳೊಂದಿಗೆ ಆಶ್ರಮವಾಸಿಗಳಲ್ಲಿ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು. ಹಿಪ್-ಹಾಪ್, ಸಮಕಾಲೀನ ಮತ್ತು ಜಾಝ್ ನೃತ್ಯ ವಿಧಗಳನ್ನು ಬೆಸೆಯುವ ವಿಶಿಷ್ಟ ನೃತ್ಯ ಸಂಯೋಜನೆಯು ಪ್ರೇಕ್ಷಕರ ಮನರಂಜಿಸಿತು.

ಕೇಂದ್ರದ ನಿರ್ದೇಶಕ ಜೋಸೆಫ್ ಕ್ರಾಸ್ತಾ, ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜಿಯಾನ್ ಲವಿನಾ ಮೊಂತೇರೊ, ಪತ್ರಕರ್ತ ಸ್ಟ್ಯಾನಿ ಬೆಳಾ, ಸ್ನೇಹಾಲಯದ ಚಾಪ್ಲಿನ್ ರೆ.ಸಿರಿಲ್ ಡಿಸೋಜ, ಸ್ಟ್ಯಾನಿ ಫೆರ್ನಾಂಡಿಸ್, ವಿದ್ಯಾ ಫೆರ್ನಾಂಡಿಸ್, ವಿನ್ಸೆಂಟ್ ಜೆರೋಮ್ ಡಿಸಿಲ್ವಾ, ಸಿಲ್ವಿಯಾ ರೀಟಾ ಡಿಸಿಲ್ವಾ, ಡೆಂಝಿಲ್ ಮೊನಿಸ್, ಮರಿಟಾ ಮೊನಿಸ್, ಎಂ.ಫ್ರೆಂಡ್ಸ್‌ನ ಕಾರ್ಯದರ್ಶಿ ರಶೀದ್ ವಿಟ್ಲ, ಉದ್ಯಮಿಗಳಾದ ಯೋಗೀಶ್ ವಿ. ಸಾಲಿಯಾನ್, ಟೈಟಸ್ ನೊರೊನ್ಹಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News