×
Ad

ಹರೇಕಳ: 'ಮೈಮೂನ-ಮರ್ಝೀನಾ' ಕೃತಿ ಬಿಡುಗಡೆ, ಮಜೀದ್ ಫಾರ್ಮ್ ಉದ್ಘಾಟನೆ

Update: 2023-12-24 19:07 IST

ಕೊಣಾಜೆ: ವಿಧವೆ ತಾಯಿ- ಸಾಫ್ಟ್‌ವೇರ್ ಇಂಜಿನಿಯರ್ ಮಗಳ ಹೈನೋದ್ಯಮದ ಯಶೋಗಾಥೆ ಪತ್ರಕರ್ತ ಅನ್ಸಾರ್ ಇನೋಳಿ ಅವರು ಬರೆದಿರುವ ಸವಾಲು ಗೆದ್ದ ತಾಯಿ ಮಗಳು 'ಮೈಮೂನಾ- ಮರ್ಝೀನಾ' ಕೃತಿ ಬಿಡುಗಡೆ ಸಮಾರಂಭ ಹಾಗೂ ಸುಸಜ್ಜಿತ ಹಟ್ಟಿ 'ಮಜೀದ್ ಫಾರ್ಮ್ ' ಉದ್ಘಾಟನೆ ರವಿವಾರ ನಡೆಯಿತು.

ಯೆನೆಪೊಯ ವಿಶ್ವವಿದ್ಯಾನಿಲಯದ ಎನ್ ಎಸ್ಎಸ್ ಸಂಯೋಜಕಿ ಡಾ.ಅಶ್ವಿನಿ ಶೆಟ್ಟಿ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು.

ಕೃತಿ ಉದ್ಘಾಟಿಸಿ ಮಾತನಾಡಿದ ಸುಚರಿತ ಶೆಟ್ಟಿ ಅವರು, ಜಗತ್ತು ಮುಂದೆ ಉಳಿಯಬೇಕಾದರೆ ಕುಟುಂಬದ ಹಿರಿಯರ ಕನಸುಗಳನ್ನು ಕುಟುಂಬದ ಕಿರಿಯ ಸದಸ್ಯರು ಯಶಸ್ವಿಗೊಳಿಸಬೇಕು. ನಮ್ಮದು ಯುವ ಮನಸ್ಸುಗಳ ರಾಷ್ಟ್ರ. ಮಾನ ವೀಯ, ಪ್ರಾಮಾಣಿಕತೆಯೊಂದಿಗೆ ಶಿಕ್ಷಣ ಪಡೆದು ವಿದ್ಯಾರ್ಥಿಗಳು ಸೇವೆಗೈದರೆ ಉದ್ಯೋಗ ಸೃಷ್ಟಿಯೊಂದಿಗೆ ಉಜ್ವಲ ರಾಷ್ಟ್ರವನ್ನು ಕಟ್ಟಲು ಸಾಧ್ಯ. ಕಾಯಕ ಸಂಸ್ಕೃತಿಯೊಂದಿಗೆ ಬದುಕಿ , ಯಶಸ್ವಿ ಜೀವನ‌ ಸಾಧಿಸಲು ಮೈಮುನಾ- ಮರ್ಝಿನಾ ಕೃತಿ ಮಾದರಿಯಾಗಲಿ ಎಂದರು.

ಇಂದಿನ ಕಾಲದಲ್ಲಿ ಹೈನುಗಾರಿಕೆ ಬಗ್ಗೆ ನಮ್ಮ ಅವಿಭಜಿತ ಜಿಲ್ಲೆಯ ಜನತೆ ಇಂದು ಉತ್ಸಾಹ ತೋರಿಸುತ್ತಿಲ್ಲ. ಯಾಕೆಂದರೆ ಹೈನುಗಾರಿಕೆ ಕಷ್ಡ ಇದೆ. ಆದರೆ ಇದರಲ್ಲಿ ಒಂದು ರೀತಿಯ ತೃಪ್ತಿಯೂ ಇದೆ ಎಂಬುದನ್ನು ನಾವು ಮನಗಾನಬೇಕು. ಮೈಮುನಾ ಕುಟುಂಬದಂತೆ ಇಂದು ಅನೇಕ ಮುಸ್ಲಿಂ ಕುಟುಂಬಗಳು ಕೂಡಾ ಹೈನುಗಾರಿಕೆಯ ಬಗ್ಗೆ ಇತ್ತೀಚೆಗೆ ಆಸಕ್ತಿ ತೋರಿಸಿ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ನರೇಗಾದ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಮುಡಿಪು ಜನಜೀವನ ಅಧ್ಯಕ್ಷ ರಮೇಶ್ ಶೇಣವ, ಲಯನ್ಸ್ ಪ್ರಾಂತೀಯ ಸಲಹೆಗಾರ ರಾಧಾಕೃಷ್ಣ ರೈ ಉಮಿಯ, ಡಿವೈಎಫ್ಐ ನ ರಫೀಕ್ ಹರೇಕಳ, ಉಳ್ಳಾಲ‌, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ಉಳ್ಳಾಲ‌ ತಾಲೂಕು ವಾಲಿಬಾಲ್ ಅಸೋಸಿಯೇ ಷನ್ ಅಧ್ಯಕ್ಷ ತ್ಯಾಗಂ ಹರೇಕಳ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ, ಉಪಾಧ್ಯಕ್ಷ ಬಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಉಪಾಧ್ಯಕ್ಷ ಅಬ್ದುಲ್ ಮಜೀದ್ ಎಂ.ಪಿ., ಚಂದ್ರಹಾಸ ಪಾತೂರು, ಮಹಮ್ಮದ್ ಮುಸ್ತಫಾ ಮಲಾರ್, ಇಸ್ಮಾಯಿಲ್ ಬಾಳೆಪುಣಿ ಇನ್ನಿತರರು ಭಾಗವಹಿಸಿದ್ದರು.

ಲೇಖಕರಾದ ಪತ್ರಕರ್ತ ಅನ್ಸಾರ್ ಇನೋಳಿ ಅವರು ಸ್ವಾಗತಿಸಿ, ದೈಹಿಕ ಶಿಕ್ಷಕ ಮೋಹನ್ ಶಿರ್ಲಾಲ್ ಅವರು ಕಾರ್ಯಕ್ರಮ‌ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News