×
Ad

ಕುಕ್ಕೆಬೆಟ್ಟು ನವೀಕೃತ ಮಸೀದಿಯ ಉದ್ಘಾಟನೆ

Update: 2023-12-25 19:26 IST

ವಿಟ್ಲ: ಕೇಪು ಗ್ರಾಮದ ಕುಕ್ಕೆಬೆಟ್ಟು ಅಲ್ ಬದರ್ ಜುಮಾ ಮಸೀದಿಯ ನವೀಕೃತ ಮಸೀದಿಯ ಉದ್ಘಾಟನೆ ಮತ್ತು ಗೌರವಾರ್ಪಣೆ ಸಮಾರಂಭ ನಡೆಯಿತು.

ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಮಸೀದಿಯನ್ನು ಉದ್ಘಾಟಿಸಿ, ವಕ್ಫ್ ನಿರ್ವಹಣೆ ಮಾಡಿದರು.

ಈ ಸಂದರ್ಭ ಅಲ್ ಬದರ್ ಜುಮಾ ಮಸೀದಿ ಉಪಾಧ್ಯಕ್ಷ ಸುಲೈಮಾನ್ ಹಾಜಿ ಅವರನ್ನು ಸನ್ಮಾನಿಸಲಾಯಿತು. ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ಮೌಲಿದ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಅಸ್ಸಯ್ಯದ್ ಝೈನುಲ್ ಆಬಿದಿನ್ ಜಿಫ್ರಿ ತಂಙಳ್ ಪೊಸೋಟು, ಉಡುಪಿ ಖಾಝಿ ಶೈಖುನಾ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಶಫೀಕ್ ಅಲ್ ಅಝ್ಹರಿ, ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಅಲ್ ಬದರ್ ಜುಮಾ ಮಸೀದಿ ಅಧ್ಯಕ್ಷ ಕೆ.ಕೆ ಇಬ್ರಾಹಿಂ ಹಾಜಿ, ಅಬ್ದುಲ್ಲಾಹ್ ದಾರಿಮಿ ಮಾಡನ್ನೂರು, ಅಬೂಬಕ್ಕರ್ ಹಾಜಿ, ಉಮ್ಮರ್ ಶರೀಫ್ ಕುಕ್ಕೆಬೆಟ್ಟು, ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News