ಬಿ.ಸಿ.ರೋಡಿನಲ್ಲಿ ಸರಣಿ ಕಳ್ಳತನ
Update: 2023-12-25 19:41 IST
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಇರುವ ಹೋಟೆಲ್, ಮೆಡಿಕಲ್ ಹಾಗೂ ಅಂಗಡಿಗಳಿಗೆ ಕಳ್ಳರು ನುಗ್ಗಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಬ.ಸಿ.ರೋಡಿನ ಆನಿಯಾ ದರ್ಬಾರ್ ಹೋಟೆಲಿಗೆ ನುಗ್ಗಿದ ಕಳ್ಳರು ಕ್ಯಾಶ್ ಡ್ರಾಯರ್ ನಲ್ಲಿದ್ದ 70 ಸಾವಿರಕ್ಕೂ ಅಧಿಕ ಮೊತ್ತದ ನಗದು ಹಣವನ್ನು ಎಗರಿಸಿದ್ದಾರೆ.
ಮುಸುಕುಧಾರಿಯಾಗಿರುವ ಕಳ್ಳನೋರ್ವ ಹೋಟೆಲಿನ ಗೇಟಿನ ಬೀಗವನ್ನು ಬಲವಂತವಾಗಿ ತೆಗೆಯುವ ದೃಶ್ಯ ಸಿಸಿ ಟಿವಿಯಲ್ಲಿ ದೊರಕಿದ್ದು, ಉಳಿದಂತೆ ಒಳ ಪ್ರವೇಶಿಸುವ ಹಂತದಲ್ಲಿ ಸಿಸಿ ಕ್ಯಾಮರಾಕ್ಕೂ ಕವಚ ಹಾಕಿ ನುಗ್ಗಿದ್ದಾನೆ. ಹೋಟೆಲ್ ನ ಇನ್ನೊಂದು ಪಕ್ಕದಲ್ಲಿರುವ ಅಂಗಡಿ, ಮೇಲಂತಸ್ತಿನಲ್ಲಿರುವ ಮೆಡಿಕಲ್ ಗೂ ನುಗ್ಗಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.