×
Ad

ಪಡುಕೆರೆ ಬೀಚ್‌ನಲ್ಲಿ ಕಾರು ಚಾಲನೆ: ಕೇರಳ ಪ್ರವಾಸಿಗರ ವಿರುದ್ಧ ಪ್ರಕರಣ ದಾಖಲು

Update: 2023-12-28 21:20 IST

ಮಲ್ಪೆ, ಡಿ.28: ವಾಹನ ಸಂಚಾರ ನಿಷೇಧಿತ ಪಡುಕೆರೆಯ ಬೀಚ್‌ನಲ್ಲಿ ಡಿ.27 ಸಂಜೆ ವೇಳೆ ಕಾರು ಚಲಾಯಿಸಿದ ಕೇರಳದ ಮೂವರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳದ ಪ್ರವಾಸಿಗರಾದ ಮಣಿಕಂಠ, ಅಯ್ಯಪ್ಪನ್, ಬಾಲಮುರುಗನ್ ಎಂಬವರು ಬೀಚ್‌ನಲ್ಲಿ ಅಪಾಯಕಾರಿಯಾಗಿ ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಪರಿಸರದ ಜನರಿಗೆ ತೊಂದರೆ ಉಂಟು ಮಾಡಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News