×
Ad

ವಿದ್ಯಾರ್ಥಿ ವೇತನ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

Update: 2024-01-06 21:18 IST

ಮಂಗಳೂರು: ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಜಾರಿಗೊಳ್ಳುತ್ತಿರುವ ವಿವಿಧ ರೀತಿಯ ವಿದ್ಯಾರ್ಥಿ ವೇತನ/ಶಿಷ್ಯವೇತನ/ಪ್ರೋತ್ಸಾಹ ಧನ/ಉತ್ತೇಜನದಂತಹ ಕಾರ್ಯಕ್ರಮ/ಯೋಜನೆಗಳಿಗೆ ಸೂಕ್ತ ಅನುದಾನ ಸಿಗದೆ ಸಮರ್ಪಕ ಜಾರಿಯಾಗದಿರುವುದನ್ನು ಖಂಡಿಸಿ ಎಸ್‌ಐಒ ಮತ್ತು ಜಿಐಒ ಉಳ್ಳಾಲ ಘಟಕವು ಶನಿವಾರ ತೊಕ್ಕೊಟ್ಟಿನಲ್ಲಿ ಪ್ರತಿಭಟನೆ ನಡೆಸಿತು.

ಎಸ್‌ಐಒಮಾಜಿ ಜಿಲ್ಲಾಧ್ಯಕ್ಷ ನಿಹಾಲ್ ಮುಹಮ್ಮದ್, ಜಿಐಒ ದ.ಕ.ಜಿಲ್ಲಾಧ್ಯಕ್ಷೆ ಅಂಜುಮ್ ಎಸ್‌ಐಒ ಉಳ್ಳಾಲ ಘಟಕದ ಅಧ್ಯಕ್ಷ ಹುನೈನ್ ಹುಸೇನ್ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಜಮಾತೆ ಇಸ್ಲಾಮಿ ಹಿಂದ್ ಉಳ್ಳಾಲ ಘಟಕ ಅಧ್ಯಕ್ಷ ಅಬ್ದುಲ್ ಕರೀಂ, ಸೋಲಿಡ್ಯಾರಿಟಿ ದ.ಕ. ಜಿಲ್ಲಾಧ್ಯಕ್ಷ ನಿಝಾಮ್ ಉಮರ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಶಾಹಿಲ್ ಸಿ.ಎಚ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News