×
Ad

ಇಂಡಿಯಾನಾ ಆಸ್ಪತ್ರೆ -ಹಾರ್ಟ್ ಇನ್‌ಸ್ಟಿಟ್ಯೂಟ್‌ನ ವಾರ್ಷಿಕ ಕ್ರೀಡಾಕೂಟ

Update: 2024-01-15 18:28 IST

ಮಂಗಳೂರು, ಜ.15: ಮಂಗಳೂರಿನ ಇಂಡಿಯಾನ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್‌ನ ‘ಇಂಡಿಯಾನಾ ವಾರ್ಷಿಕ ಕ್ರೀಡಾಕೂಟ 2024’ ನಗರದ ಸೈಂಟ್ ಅಲೋಶಿಯಸ್ ಪಿಯು ಕಾಲೇಜಿನ ಕ್ರೀಡಾಂಗಣದಲ್ಲಿ ರವಿವಾರ ನಡೆಯಿತು.

ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಪ್ರದೀಪ್ ಕುಮಾರ್ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ ಯೂಸುಫ್ ಕುಂಬ್ಳೆ , ಅಧ್ಯಕ್ಷ ಡಾ.ಅಲಿ ಕುಂಬ್ಳೆ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು.

ಪ್ರದೀಪ್ ಕುಮಾರ್ ಅವರ ಪತ್ನಿ ಅಂತರ್‌ರಾಷ್ಟ್ರೀಯ ಪವರ್ ಲಿಫ್ಟರ್ ಸ್ವಾತಿ ಪ್ರದೀಪ್ ಆಚಾರ್ಯ, ವೈದ್ಯಕೀಯ ನಿರ್ದೇ ಶಕಿ ಡಾ.ಅಪೂರ್ವ ಎಸ್, ವೈದ್ಯಕೀಯ ಆಡಳಿತಾಧಿಕಾರಿ ಡಾ.ಆದಿತ್ಯ ಭಾರದ್ವಾಜ್, ಇಂಡಿಯಾನಾ ಕಾಲೇಜ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲರು ಹಾಗೂ ಡೀನ್ ಡಾ.ಅಜಯ್ ಠಾಕೂರ್, ಇಂಡಿಯಾನಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಮನು ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು.

ಇಂಡಿಯಾನಾ ಸ್ಟಾಲಿಯನ್ಸ್, ಇಂಡಿಯಾನಾ ರೈಸಿಂಗ್ ಸ್ಟಾರ್ಸ್, ಇಂಡಿಯಾನಾ ಟೊರ್ನಾಡೋಸ್ ಮತ್ತು ಇಂಡಿಯಾನಾ ಬ್ಲೂ ವಿಂಗ್ಸ್ ವರ್ಣರಂಜಿತ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಇದೇ ವೇಳೆ ಇಂಡಿಯಾನಾ ಆಸ್ಪತ್ರೆಯ ಸಿಬ್ಬಂದಿಗೆ ಮ್ಯಾರ ಥಾನ್ ನಡೆಯಿತು. ಸಿಇಒ ಪ್ರಶಾಂತ್ ದೇಸಾಯಿ ವಂದಿಸಿದರು. ನಿಧಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News