ಯುವಕ ಆತ್ಮಹತ್ಯೆ
Update: 2024-01-16 18:56 IST
ಉಳ್ಳಾಲ: ಅವಿವಾಹಿತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಘಟನೆ ಕೋಟೆಕಾರು ಪಟ್ಟಣದ ಮಾಡೂರುನಲ್ಲಿ ನಡೆದಿದೆ.
ಕೋಟೆಕಾರು ಪಟ್ಟಣದ ಮಾಡೂರು ನಿವಾಸಿ ನಾಗರಾಜ್ ಶೆಟ್ಟಿ(32) ಮೃತ ಯುವಕ.
ಆನ್ ಲೈನ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ನಾಗರಾಜ್ ನಿನ್ನೆ ರಾತ್ರಿ ಮನೆ ಸೇರಿದ್ದ ಎನ್ನಲಾಗಿದೆ. ಬೆಳಿಗ್ಗೆ ನಾಗರಾಜನ ತಮ್ಮ ನಿಶಾನ್ ರಾಜ್ ಅಣ್ಣನ ಕೋಣೆಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಾರದಿದ್ದು ಕಿಟಕಿಯ ಮೂಲಕ ನೋಡಿದಾಗ ನಾಗರಾಜ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.
ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.