×
Ad

ನೋವಿಗೆ ಮಿಡಿಯುವ ಸೂಕ್ಷ್ಮತೆಯಿಂದ ಸಾಹಿತ್ಯದಲ್ಲಿ ಸೃಜನಶೀಲತೆ ಸಾಧ್ಯ: ಲಕ್ಷೀಶ ತೋಳ್ಪಾಡಿ

Update: 2024-01-19 21:21 IST

ಮಂಗಳೂರು ; ಕಾವ್ಯ ಕಟ್ಟುವ ಉತ್ಸವದೊಂದಿಗೆ ನೋವಿಗೆ ಮಿಡಿಯುವ ಸೂಕ್ಷ್ಮತೆಯಿಂದ ಸಾಹಿತ್ಯದಲ್ಲಿ ಸೃಜನಶೀಲತೆ ಸಾಧ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ಲಕ್ಷ್ಮೀಶ ತೋಳ್ಪಾಡಿ ತಿಳಿಸಿದ್ದಾರೆ.

ಅವರು ಇಂದು ನಗರದ ಟಿಎಂಎ ಪೈ ಇಂಟರ್‌ ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಹಮ್ಮಿಕೊಂಡಿರುವ ಮಂಗಳೂರು ಲಿಟ್‌ ಫೆಸ್ಟ್‌ನ ಆರನೇ ಆವೃತ್ತಿಯ ಮುಖ್ಯ ಅತಿಥಿ ಯಾಗಿ ಭಾಗ ವಹಿಸಿ ಮಾತನಾಡುತ್ತಿದ್ದರು.

ಸಾಹಿತ್ಯ ನಮ್ಮ ಬದುಕಿನಲ್ಲಿ ಹಾಸು ಹೊಕ್ಕು ಇದೆ. ಆದುದರಿಂದ ಸಾಹಿತ್ಯ ಅಂದರೆ ಸ್ವ ಅಧ್ಯಯನ, ಸಾಹಿತ್ಯ ವನ್ನು ತಿಳಿಯಬೇಕಾದರೆ ನಮ್ಮನ್ನು ನಾವು ತಿಳಿದುಕೊಳ್ಳುವುದು ಎಂದು ಅರ್ಥ. ಅದಕ್ಕಾಗಿ ಆಳವಾದ ಚಿಂತನೆ ಯೋಚನೆ ಅಗತ್ಯ. ಆ ಕಾರಣ ದಿಂದ ಭಾರತೀಯ ಸಾಹಿತ್ಯ ದಲ್ಲಿ ಈ ರೀತಿಯ ಒಳ ನೋಟವನ್ನು ಕಾಣ ಬಹುದು. ಇಂದು ನಮ್ಮ ನ್ನು ಆಳುತ್ತಿರುವುದು ನಮ್ಮ ಯೋಚನೆಗಳು. ಬದುಕಿನ ಘೋರತೆಯನ್ನು ಗ್ರಹಿಸುವ, ಅಳಲಿಗೆ ಕಿವಿಗೊಡುವ ಮನಸ್ಸು ಶಾಂತಿ ಯನ್ನು ಸೃಷ್ಟಿ ಸುವ,ಸೃಜನ ಶೀಲತೆಯನ್ನು ಸೃಷ್ಡಿಸುವ ಸಾಮರ್ಥ್ಯ ವನ್ನು ಹೊಂದಿದೆ ಎಂದು ತೋಳ್ಪಾಡಿ ವಿವರಿಸಿದರು.

ಲಿಟ್ ಫೆಸ್ಟ್ ಐದು ಆವೃತ್ತಿಗಳ ಕುರಿತಾಗಿ ಮೇರು ಸಾಹಿತಿಗಳು ಬರೆದ ಲೇಖನಗಳನ್ನು ಒಳಗೊಂಡ ಪುಸ್ತಕ 'ದಿ ಐಡಿಯಾ ಭಾರತ್ ' ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಧಾರವಾಡದ ವನಿತಾ ಸೇವಾ ಸಮಾಜ ಸಂಸ್ಥೆಗೆ ಈ ಬಾರಿಯ ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿ ನೀಡಲಾಯಿತು. ಸಂಸ್ಥೆಯ ಪರವಾಗಿ ಟ್ರಸ್ಟಿ ಮಧುರಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ಆರ್ ಜೆ ಅಭಿಷೇಕ್ ಮತ್ತು ನಿಧಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಭಾರತ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಲಕರ್ಣಿ ಸ್ವಾಗತಿಸಿದರು. ‌ಭಾರತ್ ಫೌಂಡೇಶನ್ ಟ್ರಸ್ಟಿಗಳಾದ ಕ್ಯಾಪ್ಟನ್ ಬೃಜೇಶ್ ಚೌಟ, ಶ್ರೀ ರಾಜ್ ಗುಡಿ, ಅಶ್ವಿನಿ ದೇಸಾಯಿ ಉಪಸ್ಥಿತರಿದ್ದರು.

*ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಯ ವತಿಯಿಂದ ಕೊನೆಯಲ್ಲಿ ಸಾಂಸ್ಕೃತಿಕ,ರಾಧೆ ಜಗ್ಗಿಯವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News