×
Ad

ಎದುರುಪದವು: ಮಹಿಳಾ ನಮಾಝ್ ಕೊಠಡಿ ನಿರ್ಮಾಣಕ್ಕೆ ಶಿಲಾನ್ಯಾಸ

Update: 2024-01-21 18:19 IST

ಮಂಗಳೂರು: ಮೂಡುಶೆಡ್ಡೆಯ ಎದುರುಪದವು ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸದ ವತಿಯಿಂದ ಮಹಿಳಾ ನಮಾಝ್ ಕೊಠಡಿ ನಿರ್ಮಾಣಕ್ಕೆ ಮಸೀದಿ ಆವರಣದಲ್ಲಿ ಶಿಲಾನ್ಯಾಸ ಮಾಡಲಾಯಿತು.

ಪಿಲಿಕುಳ ಪ್ರವಾಸಿ ತಾಣದ ಪಕ್ಕದಲ್ಲಿ ಈ ಮಸೀದಿಯಿದ್ದು. ಅನೇಕ ಪ್ರವಾಸಿಗರು ನಮಾಝ್ ನಿರ್ವಹಣೆಗೆ ಬರುತ್ತಿದ್ದಾರೆ. ಮಹಿಳಾ ಪ್ರವಾಸಿಗರ ಹಿತದೃಷ್ಟಿಯಿಂದ ನಿರ್ಮಿಸಲಾಗುವ ನಮಾಝ್ ಕೊಠಡಿಗೆ ಇರ್ಷಾದ್ ಹುಸೈನ್ ದಾರಿಮಿ ಅಲ್ ಜಝಾರಿ ಮಿತ್ತಬೈಲ್ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭ ಮಸೀದಿಯ ಅಧ್ಯಕ್ಷ ಮೈಯ್ಯದ್ದಿ, ಮಾಜಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್, ಉಪಾಧ್ಯಕ್ಷ ಎ.ಪಿ ಇಕ್ಬಾಲ್, ಜಮಾಅತ್‌ನ ಹಿರಿಯರಾದ ಹಾಜಿ ಹನೀಫ್ ಮೌಲವಿ, ಮುಅಲ್ಲಿಂ ಜಾಬೀರ್ ಜೌಹರಿ ಕಲ್ಲಡ್ಕ, ಮುಹಮ್ಮದ್ ಮುಕ್ರಿ, ಮುಹಮ್ಮದ್ ಶರೀಫ್, ಹಸನಬ್ಬ, ಮುಹಮ್ಮದ್ ಶಕೂರ್, ರಝಾಕ್ ಮಂದಾರ, ಮನ್ಸೂರ್, ಮುಹಮ್ಮದ್ ಆರೀಫ್, ಅಬ್ದುಲ್ ಖಾದರ್, ಅಬ್ದುಲ್ ಖಾದರ್ ಎ.ಕೆ, ಶೇಖ್ ಅಬ್ದುಲ್ ಖಾದರ್, ಅಥಾವುಲ್ಲ, ಎ.ಪಿ ಹಸನಬ್ಬ, ಫಾರೂಕ್ ಅಝಂ, ಹಮೀದ್ ಕೂಳೂರು, ಅಹಮ್ಮದ್ ಬಾವ, ಮುಹಮ್ಮದ್ ನೌಶಾದ್, ಅಲ್ತಾಫ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News