×
Ad

ಮಂಗಳೂರು: ಟ್ಯಾಲೆಂಟ್‌ನಿಂದ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Update: 2024-01-25 21:29 IST

ಮಂಗಳೂರು: ಟ್ಯಾಲೆಂಟ ರಿಸರ್ಚ್ ಫೌಂಡೇಶನ್ (ರಿ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯ ಕಚೇರಿ ಮಂಗಳೂರು ಉತ್ತರ ಇದರ ಜಂಟಿ ಆಶ್ರಯದಲ್ಲಿ ಅಂಕ ಉನ್ನತೀಕರಣ ಅಭಿಯಾನದ ಅಂಗವಾಗಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯವಾರು ಕಾರ್ಯಾ ಗಾರವು ಬಂದರ್ ಕಂದಕ್‌ನ ಬದ್ರಿಯಾ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ಬಂದರ್ ಕಂದಕ್‌ನ ಬದ್ರಿಯಾ ಪ್ರೌಢ ಶಾಲೆ, ಬೆಂಗರೆ ಕಸಬಾದ ಸರಕಾರಿ ಪ್ರೌಢ ಶಾಲೆ, ಬಂದರ್ ಕಸೈಗಲ್ಲಿಯ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಅಹ್ಮದ್ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕಿ ಲಲಿತಾ ಕಲ್ಕೂರ, ರಫೀಕ್ ಮಾಸ್ಟರ್ ಲಲಿತಾ ಕಲ್ಕೂರ ಪ್ರೇರಣಾ ತರಬೇತಿ ನೀಡಿದರು. ಇಂಗ್ಲೀಷ್ ತರಬೇತುದಾರರಾಗಿ ಮರ್ಲಿನ್ ಮೇಬನ್ ಮಸ್ಕರೇನಸ್, ವಿಜ್ಞಾನ ತರಬೇತು ದಾರರಾಗಿ ನೋಬರ್ಟ್ ಮಿರಾಂಡ ಪಾಲ್ಗೊಂಡಿದ್ದರು.

ಮುಖ್ಯ ಶಿಕ್ಷಕಿ ಶಾಲಿನಿ ಸ್ವಾಗತಿಸಿದರು. ಅಬ್ದುಲ್ ಹಮೀದ್ ಕಣ್ಣೂರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News