×
Ad

ಬ್ಯೂರೋಕ್ರಾಟ್ಸ್ ಇಂಡಿಯಾ ಪಟ್ಟಿಯಲ್ಲಿ ಕುಲದೀಪ್ ಜೈನ್

Update: 2024-01-30 19:02 IST

ಕುಲದೀಪ್ ಜೈನ್

ಮಂಗಳೂರು: ಬ್ಯೂರೋಕ್ರಾಟ್ಸ್ ಇಂಡಿಯಾ (ಭಾರತದ ಅಧಿಕಾರಶಾಹಿ) ಸಂಸ್ಥೆಯು ಗುರುತಿಸಿದ ‘ಆಡಳಿತ ಶಾಹಿಗಳ ತಳ ಮಟ್ಟದ ಆವಿಷ್ಕಾರಗಳು ಮತ್ತು ಕಲ್ಯಾಣ ಕಾರ್ಯಕ್ರಮ’ದ ಸಾಧಕರ ಪಟ್ಟಿಗೆ ಮಂಗಳೂರು ನಗರದ ನಿಕಟಪೂರ್ವ ಕಮಿಷನರ್ ಕುಲದೀಪ್ ಆರ್. ಜೈನ್ ಆಯ್ಕೆಯಾಗಿದ್ದಾರೆ.

ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಸರಕಾರಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಅಧಿಕಾರಶಾಹಿಗಳ ಅವಿರತ ಪ್ರಯತ್ನಗಳನ್ನು ಗುರುತಿಸಿ ಬೂರೋಕ್ರಾಟ್ಸ್ ಇಂಡಿಯಾವು ತನ್ನ ಸಾಧಕರ ಪಟ್ಟಿಗೆ ಹೆಸರು ಸೇರಿಸುತ್ತದೆ. 2023ರಲ್ಲಿ ದೇಶಾದ್ಯಂತ ಒಟ್ಟು 23 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಕುಲದೀಪ್ ಆರ್. ಜೈನ್ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಅಧಿಕಾರಿಯಾಗಿದ್ದಾರೆ.

ಕರ್ನಾಟಕ ಕೇಡರ್‌ನ 2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಕುಲದೀಪ್ ಕುಮಾರ್ ಜೈನ್ ಪ್ರಸ್ತುತ ಬೆಂಗಳೂರು ನಗರ ಪೂರ್ವ ವಿಭಾಗದ (ಟ್ರಾಫಿಕ್) ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News