ಅಡ್ಕರೆ ಫೌಂಡೇಶನ್‌ನಿಂದ ನೇತ್ರ ತಪಾಸಣಾ ಶಿಬಿರ
ಮಂಗಳೂರು: ಕೊಣಾಜೆ ಗ್ರಾಮದ ಅಡ್ಕರೆ ಎಂಬಲ್ಲಿನ ‘ಅಡ್ಕರೆ ಫೌಂಡೇಶನ್’ ವತಿಯಿಂದ ಮಂಗಳೂರು ಕೆಮಿಕಲ್ಸ್ ಫರ್ಟಿಲೈಸರ್ ಲಿ. ಪ್ರಾಯೋಜಕತ್ವದಲ್ಲಿ ಹಾಗೂ ಜಸ್ಟೀಸ್ ಕೆಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರಯ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರವು ಇತ್ತೀಚೆಗೆ ಅಡ್ಕರೆಪಡ್ಪುವಿನ ಜಮೀಯ್ಯತುಲ್ ಫಲಾಹ್ ಅಧೀನದ ಗ್ರೀನ್ ವೀವ್ ವಿದ್ಯಾಸಂಸ್ಥೆಯ ಮರ್ಹೂಮ್ ಬಿ. ಯೂಸುಫ್ ವೇದಿಕೆಯಲ್ಲಿ ನಡೆಯಿತು.
ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಪೂಡಲ್ ಮುಹಮ್ಮದ್ ಸಖಾಫಿ ಶಿಬಿರ ಉದ್ಘಾಟಿಸಿದರು. ಎಂಸಿಫ್ ಚೀಫ್ ಮ್ಯಾನುಫಾಕ್ಚರಿಂಗ್ ಆಫೀಸರ್ ಎಸ್. ಗಿರೀಶ್ ಅಧ್ಯಕ್ಷತೆ ವಹಿಸಿದ್ದರು.
ಗ್ರೀನ್ ವೀವ್ ವಿದ್ಯಾಸಂಸ್ಥೆಯ ಸಂಚಾಲಕ ಫರ್ವೇಝ್ ಅಲಿ, ಗ್ರೀನ್‌ವೀವ್ ವಿದ್ಯಾಸಂಸ್ಥೆಯ ಪೂರ್ವ ಶಿಕ್ಷಕ ರೊನಾಲ್ಡ್ ಲೂಯಿಸ್, ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಂಚಾಲಕ ಪ್ರವೀಣ್ ಮಾತನಾಡಿದರು. ಎಂಸಿಫ್ ಚೀಫ್ ಮ್ಯಾನುಫಾಕ್ಚರಿಂಗ್ ಆಫೀಸರ್ ಎಸ್. ಗಿರೀಶ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಂಸಿಎಫ್ ಡಾ. ಯೋಗೀಶ್, ಅರುಣ್, ವಿವೇಕ್ ಕೋಟ್ಯಾನ್, ಕೆಎಸ್ ಹೆಗ್ಡೆ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಹೃಷಿಕೇಶ್ ಅಮಿನ್ ಎಂಎಸ್, ಎಜೆ ಆಸ್ಪತ್ರೆಯ ಹಿರಿಯ ಸರ್ಜನ್ ಡಾ. ಜಯರಾಮ್ ಶೆಟ್ಟಿ, ಶ್ರೀ ಅರಸು ಪೈಂದೊಷ್ಣಾಯ ಪೊಸಬೂತ ಬಂಟಗಳ ದೈವಸ್ಥಾನ ಪೆಲತ್ತಡಿ ಇದರ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಕಾನೆಕೆರೆ, ಅಡ್ಕರೆ ಫೌಂಡೇಶನ್ ಸಂಚಾಲಕ ಕೆ.ಬಿ. ಹುಸೈನ್, ಎಂಜೆಎಂ ಅಧ್ಯಕ್ಷ ಜಹಫರ್, ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಖಾದರ್, ಅಲ್ ಇಹ್ಸಾನ್ ಅಧ್ಯಕ್ಷ ಸಿದ್ದೀಕ್ ಬಿಪಿ, ವಿನ್ಸಿ ಡಿಸೋಝ ಎಬಿ ಹಸೈನಾರ್ ಉಪಸ್ಥಿತರಿದ್ದರು.
ಅಡ್ಕರೆ ಫೌಂಡೇಶನ್ ಸ್ಥಾಪಕ ಎಂ. ಸಿರಾಜ್ ಅಡ್ಕರೆ ಸ್ವಾಗತಿಸಿದರು. ಗ್ರೀನ್‌ವೀವ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಅಬೂಬಕರ್ ಕೆ. ವಂದಿಸಿದರು.