×
Ad

ವಿಟ್ಲ : ಹೃದಯಾಘಾತದಿಂದ ಪತ್ರಿಕಾ ಸಿಬ್ಬಂದಿ ನಿಧನ

Update: 2024-01-30 20:34 IST

ಪುತ್ತೂರು: ಯುವಕನೊಬ್ಬ ತಡರಾತ್ರಿ ಹೃದಯಾಘಾತಕ್ಕೆ ತುತ್ತಾಗಿ ಮನೆಯ ಶೌಚಾಲಯದ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಸುದ್ದಿ ಬಿಡುಗಡೆ ಪತ್ರಿಕೆಯ ಸಿಬ್ಬಂದಿ ಕುದ್ದುಪದವು ನಿವಾಸಿ ನವೀನ್‌ ಕಿಶೋ‌ರ್ ಮೃತ ಯುವಕ.

ನವೀನ್‌ ಕಿಶೋರ್‌ ಸುದ್ದಿ ಬಿಡುಗಡೆ ಪತ್ರಿಕೆಯ ಸರ್ಕ್ಯುಲೇಷನ್‌ ವಿಭಾಗದಲ್ಲಿ ಉದ್ಯೋಗಿಯಾಗಿದ್ದು , ಜ.29ರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದಾರೆ. ತಡರಾತ್ರಿ ಶೌಚಾಲಯಕ್ಕೆಂದು ಹೋದವರು ಅಲ್ಲಿಯೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಡ ರಾತ್ರಿ 2 ಗಂಟೆ ಸುಮಾರಿಗೆ ಅವರ ಸಹೋದರ ಎಚ್ಚರಗೊಂಡಾಗ ನವೀನ್‌ ಕಿಶೋರ್ ಕುಸಿದು ಬಿದ್ದಿರುವುದು ಕಂಡಿದ್ದಾರೆ.

ತಕ್ಷಣ ಮನೆ ಮಂದಿ ಸ್ಥಳೀಯರ ನೆರವಿನಿಂದ ವಿಟ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ನವೀನ್‌ ಕಿಶೋರ್‌ ಮೃತಪಟ್ಟಿ ರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಮೃತರು ತಾಯಿ, ಸಹೋದರ ಮತ್ತು ಸಹೋದರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News