×
Ad

ಸಂತ ಆ್ಯಗ್ನೆಸ್ ಸ್ವಾಯತ್ತ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

Update: 2024-01-30 20:37 IST

ಮಂಗಳೂರು: ‘ಭರವಸೆ, ನಿರಂತರ ಪ್ರಯತ್ನದಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಮಂಗಳೂರಿನ ಚಿನ್ನದ ಹುಡುಗಿ ಖ್ಯಾತಿಯ ಕ್ರೀಡಾ ಸಾಧಕಿ ಪ್ರಸ್ತುತ ರೈಲ್ವೆ ಉದ್ಯೋಗಿಯಾಗಿರುವ ಶ್ರೀಮಾ ಪ್ರಿಯದರ್ಶಿನಿ ಅಭಿಪ್ರಾಯಪಟ್ಟಿದ್ದಾರೆ.

ಸಂತ ಆ್ಯಗ್ನೆಸ್ ಸ್ವಾಯತ್ತ ಕಾಲೇಜಿನಲ್ಲಿ ಸೋಮವಾರ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ನನ್ನ ಕ್ರೀಡಾ ಬದುಕಿನಲ್ಲೂ ಅನೇಕ ಸವಾಲುಗಳು ಎದುರಾಗಿದ್ದವು. ಅಂತರ ರಾಷ್ಟ್ರೀಯ ಕ್ರೀಡೆಯ ಸಂದರ್ಭದಲ್ಲಿ ನನಗೂ ನನ್ನ ಎಂಟನೆಯ ಪ್ರಯತ್ನದಲ್ಲಿ ಜಯ ದೊರಕಿತು. ನಮ್ಮ ಬಗ್ಗೆ ನಾವು ನಂಬಿಕೆ ಇಡಬೇಕು. ನಮ್ಮಲ್ಲಿರುವ ಆತ್ಮ ವಿಶ್ವಾಸವನ್ನು ಎಂದೂ ಕಳೆದುಕೊಳ್ಳಬಾರದು ಎಂದರು.

ಸಂಸ್ಥೆಯ ಸಹ ಕಾರ್ಯದರ್ಶಿ ಡಾ.ಸಿಸ್ಟರ್ ಮರಿಯ ರೂಪಾ ಎ.ಸಿ, ಕಾಲೇಜಿನ ಆಡಳಿತಾಧಿಕಾರಿ ಸಿಸ್ಟರ್ ಕಾರ್ಮೆಲ್ ರೀಟಾ ಎ.ಸಿ, ಉಪಪ್ರಾಂಶುಪಾಲೆ ಸಿಸ್ಟರ್ ಕ್ಲಾರಾ ಎ.ಸಿ, ಸ್ನಾತಕೋತ್ತರ ವಿಭಾಗದ ಕೋರ್ಡಿನೇಟರ್ ಸಿಸ್ಟರ್ ವಿನೋರ, ದೈಹಿಕ ಶಿಕ್ಷಕಿ ವಸುಧಾ, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ಡೀನ್, ಪ್ರಾಧ್ಯಾಪಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಲೇಜು ಪ್ರಾಂಶುಪಾಲೆ ಡಾ.ಸಿ.ಎಂ.ವೆನಿಸ್ಸಾ ಎ.ಸಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ. ನಮಿತಾ ವಂದಿಸಿ ದರು. ವಿದ್ಯಾರ್ಥಿನಿ ದೆರಿಶಾ ಸಿಕ್ವೇರಾ ಹಾಗೂ ಪ್ರತೀಕ್ಷಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಆರಂಭದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ತೃತೀಯ ಬಿಕಾಂ ವಿದ್ಯಾರ್ಥಿನಿ ಹಾಗೂ ಅಂತರ್‌ರಾಷ್ಟ್ರೀಯ ಕರಾಟೆ ಪ್ರಶಸ್ತಿ ವಿಜೇತೆ ಮತ್ತು ಕ್ರೀಡಾ ಸಂಘದ ಕಾರ್ಯದರ್ಶಿಯೂ ಆಗಿರುವ ಪ್ರೇರಣಾ ಅವರು ಮುಖ್ಯ ಅತಿಥಿಗಳಿಂದ ಕ್ರೀಡಾ ಜ್ಯೋತಿಯನ್ನು ಪಡೆದು ಬೆಳಗಿಸಿದರು. ಕ್ರೀಡಾಕೂಟದ ಅಂಗವಾಗಿ ವಿದ್ಯಾರ್ಥಿ ವ್ಯಾಪಾರಿ, ಆಹಾರ ಮೇಳವೂ ಜರುಗಿತು.

ಸಮಾರೋಪ : ಸಂತ ಆಗ್ನೆಸ್ ಸ್ವಾಯತ್ತ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಗ್ರಂಥಪಾಲಕಿ ಡಾ.ವಿಶಾಲ ಬಿ.ಕೆ ಭಾಗವಹಿಸಿ ವಿವಿಧ ಸ್ಪ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News