ದ.ಕ.ಜಿಲ್ಲೆಯ ವಿವಿಧೆಡೆ ಸಂವಿಧಾನ ಜಾಥಾ ಸಂಚಾರ
Update: 2024-01-31 20:42 IST
ಮಂಗಳೂರು: ಭಾರತದ ಸಂವಿಧಾನದ ಆಚರಣೆ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ಸಂವಿಧಾನ ಜಾಥಾ ರಥವು ಬುಧವಾರ ಮಂಗಳೂರು ತಾಲೂಕಿನ ಜೋಕಟ್ಟೆ, ಬಾಳ, ಚೇಳ್ಯಾರು, ಸೂರಿಂಜೆ ಗ್ರಾಪಂಗಳಲ್ಲಿ ಮತ್ತು ಬಂಟ್ವಾಳ ತಾಲೂಕಿನ ಫರಂಗಿಪೇಟೆ, ಪುದು, ಮೇರೆಮಜಲು, ಕಳ್ಳಿಗೆ, ತುಂಬೆ ಗ್ರಾಮಗಳಲ್ಲಿ ಸಂಚರಿಸಿತು.
ಸ್ಥಳೀಯ ಗ್ರಾಪಂ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಒಳಗೊಂಡ ಸಂವಿಧಾನ ಜಾಗೃತಿ ಜಾಥಾ ಸ್ತಬ್ದಚಿತ್ರವನ್ನು ಪ್ರದರ್ಶಿಸಲಾಯಿತು. ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯ ನ್ನೊಳಗೊಂಡ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.