ತೊಕ್ಕೊಟ್ಟುನಲ್ಲಿ ಸರಣಿ ಅಪಘಾತ
Update: 2024-01-31 20:58 IST
ಉಳ್ಳಾಲ: ವಾಹನಗಳ ಸರಣಿ ಅಪಘಾತದಲ್ಲಿ ಕಾರು ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟುವಿನಲ್ಲಿ ನಡೆದಿದೆ.
ತೊಕ್ಕೊಟ್ಟು ಜಂಕ್ಷನ್ ಬಳಿ ಬರುತ್ತಿದ್ದ ಪಿಕಪ್ ವಾಹನವನ್ನು ಚಾಲಕ ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ. ಆದರೆ ಅದೇ ವೇಗದಲ್ಲಿ ಹಿಂಬದಿಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಪಿಕಪ್ ವಾಹನ ಹಠಾತ್ ನಿಲ್ಲುವ ಅರಿವಿಲ್ಲದೆ ನೇರವಾಗಿ ಪಿಕಪ್‍ನ ಹಿಂಭಾಗಕ್ಕೆ ಗುದ್ದಿದೆ. ಇದೇ ವೇಳೆ ಕಾರಿನ ಹಿಂಬದಿಯಿಂದ ಬಂದ ಗೂಡ್ಸ್ ಲಾರಿಯೊಂದು ಸ್ವಿಫ್ಟ್ ಕಾರಿನ ಹಿಂಭಾಗಕ್ಕೆ ಗುದ್ದಿದೆ. ಈ ಸರಣಿ ಅಪಘಾತದಿಂದ ಸ್ವಿಫ್ಟ್ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯ ಇಲ್ಲದೆ ಪಾರಾಗಿದ್ದಾರೆ.
ಮಂಗಳೂರು ದಕ್ಷಿಣ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆ ಸಂಚಾರ ಸುಗಮಗೊಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.