ಮಂಜನಾಡಿ ಅಲ್ ಮದೀನದಲ್ಲಿ ಸಾಮೂಹಿಕ ವಿವಾಹ
ಕೊಣಾಜೆ: ಅಲ್ ಮದೀನಾ ಮಂಜನಾಡಿಯಲ್ಲಿ 30ನೇ ವಾರ್ಷಿಕ ಸನದುದಾನ ಸಮ್ಮೇಳನ ಫೆ.5 ವರೆಗೆ ನಡೆಯಲಿದ್ದು, ಶನಿವಾರದಂದು ಏಳು ಜೋಡಿಗಳಿಗೆ ಸಾಮೂಹಿಕ ವಿವಾಹವು ಅಲ್ ಮದೀನಾ ಅನಾಥಾಶ್ರಮದ ಆವರಣದಲ್ಲಿ ಜರುಗಿತು.
ಶರಪುಸ್ಸಾದಾತ್ ಸಯ್ಯಿದ್ ಅಶ್ರಫ್ ತಂಞಳ್,ಸಯ್ಯಿದ್ ಸಾದಾತ್ ತಂಞಳ್, ಸಯ್ಯಿದ್ ಹಬೀಬುಲ್ಲಾ ತಂಙಳ್, ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ, ಸಯ್ಯಿದ್ ಉವೈಸ್ ತಂಙಳ್, ಅಬ್ದುಲ್ ಅಹ್ಸನಿ ಉಸ್ತಾದ್, ಅಬ್ದುಲ್ ರಹಮಾನ್ ಅಹ್ಸನಿ ಮೊದಾಲದವರು ನಿಖಾಹ್ ನೇತ್ರತ್ವ ವಹಿಸಿದ್ದರು.
ವಿವಾಹದಲ್ಲಿ ಆಯಿಷತ್ತುಲ್ ಅಸ್ಮೀನ ಮತ್ತುಮುಹಮ್ಮದ್ ಜಾಬಿರ ಜೌಹರಿ, ಫಾತಿಮತ್ ಫಝೀಲ ಮತ್ತು ಶಾಹುಲ್ ಹಮೀದ್, ನುಸೈಬ ಮತ್ತು ಮುಹಮ್ಮದ್ ಆಸಿಫ್, ನಿಝಾನ ಬಾನು ಮತ್ತು ಜಲಾಲುದ್ದೀನ್, ನೂರುನ್ನೀಸ ಮತ್ತು ಮುಹಮ್ಮದ್ ಅಮೀನುಲ್ಲಾ, ತಬ್ಸೀರ ತಲಕ್ಕಿ ಮತ್ತು ಮುಹಮ್ಮದ್ ಇಮ್ತಯಾಝ್, ಶಾಹಿದಾ ಬಾನು ಮತ್ತು ಇಬ್ರಾಹಿಂ ಇಮ್ತಿಯಾಝ್ ನೂತನ ಸತಿ ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕಾರ್ಯಕ್ರಮದಲ್ಲಿ ಮುಖಂಡರಾದ ರಶೀದ್ ಹಾಜಿ, ಎಸ್ ಕೆ ಖಾದರ್ ಹಾಜಿ, ಅಬ್ದುಲ್ ಜಲೀಲ್ ಮೊಂಟುಗೋಳಿ, ಎ಼ಷ್ಯನ್ ಬಾವಾ ಹಾಜಿ, ಮುನೀರ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.
ಮುಹಮ್ಮದ್ ಕುಂಞ ಸ್ವಾಗತಿಸಿ, ಎನ್.ಎಸ್ ಕರೀಂ ವಂದಿಸಿದರು. ಕೆ.ಎಂ.ಕೆ.ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.