×
Ad

ಸೈಂಟ್ ಅಲೋಶಿಯಸ್‌ನಲ್ಲಿ ‘ಟೆಡ್ ಎಕ್ಸ್ ಸ್ಯಾಕ್’ ಉದ್ಘಾಟನೆ

Update: 2024-02-03 19:55 IST

ಮಂಗಳೂರು: ಸೈಂಟ್ ಅಲೋಶಿಯಸ್ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ವತಿಯಿಂದ ಶನಿವಾರ ಟೆಡ್ ಎಕ್ಸ್‌ಸ್ಯಾಕ್ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಟೆಡ್ ಕಂಪನಿಯ ಪರವಾನಿಗೆಯೊಂದಿಗೆ ಸೈಂಟ್ ಅಲೋಶಿಯಲ್ ವಿವಿಯಲ್ಲಿ ನಡೆಯುವ ಉಪನ್ಯಾಸ ಕಾರ್ಯಕ್ರಮ ಇದಾ ಗಿದ್ದು, ಅದಾನಿ ಸಮೂಹಗಳ ಕಾರ್ಯಕಾರಿ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟನೆ ನೆರವೇರಿಸಿದರು.

ಪ್ರಸಕ್ತ ಸಾಲಿನ ಟೆಡ್ ಎಕ್ಸಂ ಸ್ಯಾಕ್‌ನಲ್ಲಿ 12 ಮಂದಿ ಭಾಷಣಗಾರರಿದ್ದು, ಟಿವಿ ಕಲಾವಿದ ಹಾಗೂ ಹಾಸ್ಯಗಾರ ಗಿರೀಶ್ ಸಹದೇವ್, ಯುದ್ಧ ಪರಿಣಿತ ಮೇಜರ್ ಸಮರ್ ತೂರ್, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ನೀರಜ್ ಚೌಧುರಿ, ಹಿನ್ನೆಲೆ ಗಾಯಕ ಸಂಗೀತ ನಿರ್ಮಾಪಕ ಕಾರ್ತಿಕ್ ಚೆನ್ನೋಜಿ ರಾವ್, ಭಾರತೀಯ ಅಂಧರ ಕ್ರಿಕೆಟ್ ತಂಡದ ಮಾಡಿ ನಾಯಕ ಪದ್ಮಶ್ರೀ ಪುರಸ್ಕೃತ ಶೇಖಱ್ ನಾಯ್ಕ್, ಎಲ್‌ಜಿಬಿಟಿಕ್ಯೂನ ಕಾರ್ಯಕರ್ತೆ ಆರತಿ ಮಲ್ಹೋತ್ರ, ಪಶ್ಚಿಮ ಬಂಗಾಲದ ಖ್ಯಾತ ಚಾಯಾಚಿತ್ರಗಾರ ವಿಕ್ಕಿ ರಾಯ್, ಭರತನಾಟ್ಯ ಕಲಾವಿದ ಎಂ. ಫಾ. ಸಜು ಜಾರ್ಜ್, ಆ್ಯಸಿಡ್ ದಾಳಿಗೆ ಒಳಗಾದ ಪ್ರಮೋದಿನಿ ರಾವ್, ಮಾಸ್ಟರ್ ಶೆಫ್ ಇಂಡಿಯಾದ ಅಂತಿಮ ಸ್ಪರ್ಧಿ ಡಾ. ರುಕ್ಸರ್ ಸಯ್ಯದ್, ಉದ್ಯಮಿ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ದೀಕ್ಷಿತ್ ರೈ, ವಿಯೆಟ್ನಾಂನಲ್ಲಿ ವೈಇಪಿ ಭಾರತವನ್ನು ಪ್ರತಿನಿಧಿಸಿ ಎನ್‌ಸಿಸಿ ಕೆಡೆಟ್ ಆಶ್ನಾ ರೈ ಟೆಡ್ ಎಕ್ಸ್ ಸ್ಯಾಕ್‌ನಲ್ಲಿ ಭಾಷಣ ನೀಡಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಪ್ರಮುಖರಾದ ರೆ.ಫಾ. ಮೆಲ್ವಿನ್ ಜೋಸೆಫ್ ಪಿಂಟೋ, ಸತತ ಪರಿಶ್ರಮಯದಿಂದ ಯಶಸ್ಸು ಪಡೆಯಲುಸಾಧ್ಯ. ಹಾಗಾಗಿ ಕಾಲೇಜು ಇಂದು ವಿವಿಯಾಗಿ ಮಾನ್ಯತೆ ಪಡೆಯಲು ಸಾಧ್ಯವಾಗಿದೆ ಎಂದರು.

ಸಂತ ಅಲೋಶಿಯಸ್ ಪರಿಗಣಿಸಲ್ಪಟ್ಟ ವಿವಿ ಕುಲಪತಿ (ಪ್ರಭಾರ) ವಂ. ಫಾ. ಪ್ರವೀಣ್ ಮಾರ್ಟಿಸ್, ಸಂಯೋಜಕಿ ಡಾ. ಸ್ಮಿತಾ ಡಿ.ಕೆ., ಸಹ ಸಂಯೋಜಕಿ ಕ್ಲಾರೆಟ್ ವಿನಯ ಪಿರೇರಾ, ಫ್ಲೋನಾ ಸೋನ್ಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News