ವಿಶ್ವ ಕ್ಯಾನ್ಸರ್ ದಿನಾಚರಣೆ: ದ.ಕ. ಜಿಲ್ಲಾಡಳಿತ ವತಿಯಿಂದ ಕ್ಯಾನ್‌ವಾಕ್-ವಾಕಥಾನ್
ಮಂಗಳೂರು: ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ದ.ಕ. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆ ಪ್ಯಾಲಿಯೇಟಿವ್ ಮೆಡಿಸಿನ್ ವಿಭಾಗ, ಜಿಲ್ಲಾ ಸರ್ವೇಕ್ಷಣಾ ಘಟಕ, ಎನ್‌ಸಿಡಿ ಕೋಶ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತ ಆಶ್ರಯದಲ್ಲಿ ಕ್ಯಾನ್‌ವಾಕ್ -2024 ವಾಕಥಾನ್ ರವಿವಾರ ನಡೆಯಿತು.
ನಗರದ ಲಾಲ್‌ಬಾಗ್‌ನಲ್ಲಿರುವ ಮಂಗಳೂರು ಮಹಾನಗರಪಾಲಿಕೆಯ ಆವರಣದಲ್ಲಿ ಈ ವಾಕಥಾನ್‌ಗೆ ಚಾಲನೆ ನೀಡಲಾ ಯಿತು. ಬಳಿಕ ಪಿ.ವಿ.ಎಸ್ ಜಂಕ್ಷನ್, ನವಭಾರತ ವೃತ್ತ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ, ವೆನ್ಲಾಕ್ ಮಾರ್ಗವಾಗಿ ನೆಹರೂ ಮೈದಾನ ಬಳಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಬಳಿ ಸಮಾಪ್ತಿಗೊಂಡಿತು.
ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ, ವೈದ್ಯಾಧಿಕಾರಿಗಳಾದ ಡಿಎಸ್‌ಒ ಡಾ. ಸದಾಶಿವ ಶಾನುಭಾಗ್, ಡಿಎಲ್‌ಒ ಡಾ. ಸುದರ್ಶನ್, ಡಿಎಂಒ ಡಾ. ನವೀನ್, ಟಿಎಚ್‌ಒ ಡಾ. ಸುಜಯ್ ಭಂಡಾರಿ, ಡಾ. ಅಣ್ಣಯ್ಯ ಕುಲಾಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಜಿಲ್ಲಾ ಎನ್‌ಸಿಡಿ ಕೋಶದ ವೈದ್ಯರು, ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.