ಅಡ್ಡೂರು: ಎಸ್‌ಕೆಎಸ್‌ಎಂನಿಂದ ಧಾರ್ಮಿಕ ಪ್ರವಚನ
Update: 2024-02-05 21:09 IST
ಮಂಗಳೂರು: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಅಡ್ಡೂರು ಘಟಕ ಮತ್ತು ಎಸ್‌ಕೆಎಸ್‌ಎಂ ಯೂತ್ ವಿಂಗ್ ಅಡ್ಡೂರು ಘಟಕದ ಜಂಟಿ ಆಶ್ರಯದಲ್ಲಿ ಅಂಧಕಾರದಿಂದ ಪ್ರಕಾಶದೆಡೆಗೆ ಎಂಬ ಧ್ಯೇಯವಾಕ್ಯದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಅಡ್ಡೂರು ಜಂಕ್ಷನ್‌ನಲ್ಲಿ ನಡೆಯಿತು.
ಎಸ್‌ಕೆಎಸ್‌ಎಂ ಕೇಂದ್ರ ಸಮಿತಿಯ ಅಧ್ಯಕ್ಷ ಬಶೀರ್ ಅಹ್ಮದ್ ಶಾಲಿಮಾರ್ ಸಂದೇಶ ಭಾಷಣಗೈದರು. ಮುಸ್ತಫಾ ದಾರಿಮಿ ‘ತೌಹೀದ್’ ಎಂಬ ವಿಷಯದಲ್ಲಿ ಮತ್ತು ಮೌಲವಿ ಉನೈಸ್ ಪಾಪಿನಶ್ಶೇರಿ ‘ಪ್ರತಿಯೊಂದು ಶರೀರವು ಮರಣದ ರುಚಿಯನ್ನು ಅನುಭವಿಸಲಿದೆ’ ಎಂಬ ವಿಷಯದಲ್ಲಿ ಪ್ರವಚನ ನೀಡಿದರು.
ಮುಬಾರಿಶ್ ಕಿರಾಅತ್ ಪಠಿಸಿದರು. ಫೌಝಾನ್ ಸ್ವಾಗತಿಸಿದರು. ವಲೀದ್ ಹುಸೈನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ರಿಯಾಝ್ ಅಹ್ಮದ್, ಹಸನ್ ಸಚ್ಚರಿಪೇಟೆ, ಅಬ್ದುಲ್ ಸತ್ತಾರ್ ಆಸ್ಕೋ, ಅಬ್ದುಲ್ ಮುನೀರ್, ಶೌಕತ್ ಅಲಿ, ಅಬ್ದುಲ್ ರಹ್ಮಾನ್ ಬಂಡಸಾಲೆ, ಅಶ್ರಫ್ ಕುದ್ರೋಳಿ ಉಪಸ್ಥಿತರಿದ್ದರು.