×
Ad

ಆಲಡ್ಕ: ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ

Update: 2024-02-07 17:34 IST

ಬಂಟ್ವಾಳ : ಇಂದು ಲೋಕವು ಪರಿಹಾರವಿಲ್ಲದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದಕ್ಕೆಲ್ಲ ಪರಿಹಾರ ಇರುವ ಏಕೈಕ ಮಾರ್ಗ ಆಧ್ಯಾತ್ಮಿಕತೆಯೆಡೆಗೆ ಮರಳುವುದಾಗಿದೆ ಎಂದು ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸಿನ ರೂವಾರಿ, ಸುನ್ನೀ ವಿದ್ವಾಂಸ ಕೇರಳ-ವಾಯಕ್ಕಾಡಿನ ವಲಿಯುದ್ದೀನ್ ಫೈಝಿ ಹೇಳಿದರು.

ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆ ಇದರ ದಶ ವಾರ್ಷಿಕ ಸಂಭ್ರಮದ ಪ್ರಯುಕ್ತ ಆಲಡ್ಕದ ಮರ್ಹೂಂ ಶೈಖುನಾ ಶಂಸುಲ್ ಉಲಮಾ ನಗರ, ಮರ್ ಹೂಂ ಶೈಖುನಾ ಮಿತ್ತಬೈಲು ಉಸ್ತಾದ್ ದ್ವಾರ, ಮರ್ಹೂಂ ಶೈಖುನಾ ಸಜಿಪ ಉಸ್ತಾದ್ ವೇದಿಕೆಯಲ್ಲಿ ಮಂಗಳವಾರ ರಾತ್ರಿ ನಡೆದ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮಕ್ಕೆ ನೇತೃತ್ವ ನೀಡಿ ಮಾತನಾಡಿದ ಅವರು, ಸರ್ವಶಕ್ತನಾದ ಅಲ್ಲಾಹನ ಸ್ಮರಣೆಯಿಂದ ಮನಶ್ಶಾಂತಿ ದೊರೆಯುವುದರ ಜೊತೆಗೆ ಇಹಲೋಕ ಹಾಗೂ ಪರಲೋಕ ವಿಜಯಕ್ಕೂ ಕಾರಣವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಕೆ.ಪಿ. ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಮಾತನಾಡಿ, ಆಧ್ಯಾತ್ಮಿಕ ಮಜ್ಲಿಸ್ ಗಳು ಆಧ್ಯಾತ್ಮಿಕ ಉದ್ದೇಶವನ್ನೇ ಪ್ರಮುಖವಾಗಿ ಮೈಗೂಡಿಸಿ ಕೊಳ್ಳಬೇಕಾಗಿದೆ. ಹೀಗಿದ್ದಾಗ ಅದರ ಜೊತೆಗೆ ಐಹಿಕವಾಗಿ ಮನಶ್ಶಾಂತಿ ದೊರೆಯಲಿದೆ ಎಂದರು.

ದುವಾಶಿರ್ವಚನಗೈದ ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ ಅವರು ಮಾತನಾಡಿ, ಆಧ್ಯಾತ್ಮಿಕ ಕಾರ್ಯಕ್ರಮ ಗಳು ತನ್ನ ಐಹಿಕ ಉದ್ದೇಶ ಈಡೇರಿದ ತಕ್ಷಣ ಅದರಿಂದ ಹಿಂದೆ ಸರಿಯದೆ ಜೀವನ ಪರ್ಯಂತ ಅಲ್ಲಾಹನ ಸ್ಮರಣೆಯನ್ನು ಅಳವಡಿಸಿಕೊಂಡು ಧನ್ಯರಾಗುವಂತಾಗಬೇಕು ಎಂದರು.

ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾಧ್ಯಕ್ಷ ಮುಹಮ್ಮದ್ ಇಶಾಕ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಖತೀಬ್ ಉಸ್ಮಾನ್ ರಾಝಿ ಬಾಖವಿ, ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್ ಖತೀಬ್ ಅಶ್ರಫ್ ಫೈಝಿ ಮಲಾರ್, ಅಧ್ಯಕ್ಷ ಉಬೈದುಲ್ಲಾ ಹಾಜಿ, ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮೋನಾಕ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಇಂಜಿನಿಯರ್, ಮಲಾಯಿಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಕರಂದಾಡಿ, ಮುಹಮ್ಮದ್ ನಂದಾವರ, ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ಬಶೀರ್ ಇಸ್ಮಾಯಿಲ್, ಆಲಡ್ಕ ಶಾಖಾ ಗೌರವಾಧ್ಯಕ್ಷ ಅಬ್ದುಲ್ ಖಾದರ್ ಬೋಗೋಡಿ, ಖಾದರ್ ಮಾಸ್ಟರ್ ಬಂಟ್ವಾಳ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಆಲಡ್ಕ ಶಾಖಾ ಪ್ರಮುಖರಾದ ಮುಹಮ್ಮದ್ ಹನೀಫ್ ಹಾಸ್ಕೋ, ಮುಹಮ್ಮದ್ ಶಫೀಕ್ ಆಲಡ್ಕ, ಅಬ್ದುಲ್ ಅಝೀಝ್ ಪಿಐಬಿ, ಅಬೂಬಕ್ಕರ್ ಎನ್ ಬಿ, ಅಬ್ದುಲ್ ಮಜೀದ್ ಬೋಳಂಗಡಿ, ಝುಬೈರ್ ಯು, ರಫೀಕ್ ಇನೋಳಿ, ಅಬ್ದುಲ್ ಸಲಾಂ, ಅಬ್ದುಲ್ ಮುತ್ತಾಲಿಬ್, ಮುಹಮ್ಮದ್ ಹನೀಫ್ ಡ್ರೈಫಿಶ್, ಅಬ್ದುಲ್ ಖಾದರ್ ಪುತ್ತುಮೋನು, ಅಬ್ದುಲ್ ಜಬ್ಬಾರ್ ಪಡ್ಪು, ಶಾಫಿ ಹಾಜಿ ಬಂಗ್ಲೆಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಸ್ವಾಗತಿಸಿ, ವಿದ್ಯಾರ್ಥಿ ಮುಹಮ್ಮದ್ ರಹೀಝ್ ಕಿರಾಅತ್ ಪಠಿಸಿದರು. ನೆಹರುನಗರ ಮದ್ರಸ ವಿದ್ಯಾರ್ಥಿಗಳು ದಫ್ ಪ್ರರ್ಶನ ನೀಡಿದರು. ನಾಸಿರ್ ಬೊಳ್ಳಾಯಿ ಕಾರ್ಯಕ್ರಮ ನಿರೂಪಿಸಿದರು.










Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News