ಬುರೈದಾ: ಮರ್ಕಝುಲ್ ಹುದಾ ವಾರ್ಷಿಕ ಸಂಗಮಕ್ಕೆ ತೆರೆ
ಮಂಗಳೂರು: ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾ ಬುರೈದಾ ಸಮಿತಿಯ ವಾರ್ಷಿಕ ಸಂಗಮವು ಇತ್ತೀಚೆಗೆ ಬುರೈದಾ ಅರ್ಬಈನ್ ಸೈನ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಕೇಂದ್ರ ಸಮಿತಿಯ ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್ ಸಂಸ್ಥೆಯ ಕಾರ್ಯ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಬುರೈದಾ ಸಮಿತಿ ಉಪಾಧ್ಯಕ್ಷ ಅಬ್ದುಲ್ಲಾ ಕೊಯ್ಲ ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಾಲಿಹ್ ಬೆಳ್ಳಾರೆ ಸಭೆಯನ್ನು ಉದ್ಘಾಟಿಸಿದರು.
ಮರ್ಕಝುಲ್ ಹುದಾ ಸೌದಿ ಅರೇಬಿಯಾ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಪ್ರಾಸ್ತಾವಿಕ ಭಾಷಣ ಮಾಡಿ ದರು. ರಿಯಾದ್ ಘಟಕದ ಅಧ್ಯಕ್ಷ ಅಶ್ರಫ್ ಕಿಲ್ಲೂರ್, ಪ್ರಧಾನ ಕಾರ್ಯದರ್ಶಿ ಕೆಎಂಎಸ್ ಅಶ್ರಫ್ ನೀರಕಟ್ಟೆ, ಸಮಿತಿ ನಾಯಕರಾದ ಅಬ್ದುಲ್ ರಝಾಕ್ ಬಾರ್ಯ, ಇಲ್ಯಾಸ್ ಲತೀಫಿ, ಡಿಕೆಎಸ್ಸಿ ಬುರೈದಾ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಕಣ್ಣಂಗಾರ್, ದಾರುಲ್ ಇರ್ಷಾದ್ ಅಧ್ಯಕ್ಷ ಅಬ್ದುಲ್ ರಝಾಕ್ ನೆಕ್ಕಿಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಬುರೈದಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಆನಡ್ಕ ಸ್ವಾಗತಿಸಿದರು. ಕೋಶಾಧಿಕಾರಿ ಝಕರಿಯಾ ಕೊರಿಂಗಿಲ ಕಾರ್ಯಕ್ರಮ ನಿರೂಪಿಸಿದರು.