×
Ad

ಯೆನೆಪೊಯ ತಂಡಕ್ಕೆ ಅಹ್ಮದ್ ಮಾಸ್ಟರ್ ಮತ್ತು ರೇಂಜರ್ಸ್ ತಂಡಕ್ಕೆ ಪಳ್ಳಿ ಜಯರಾಮ್ ಶೆಟ್ಟಿ ಪ್ರಶಸ್ತಿ

Update: 2024-02-09 20:46 IST

ಮಂಗಳೂರು: ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಇದರ ಆಶ್ರಯದಲ್ಲಿ ನಗರದ ನೆಹರೂ ಮೈದಾನದ ಫುಟ್ಬಾಲ್ ಮೈದಾನದಲ್ಲಿ ಕಳೆದ 25 ದಿನಗಳ ಕಾಲ ನಡೆದ ದಿ.ಅಹ್ಮದ್ ಮಾಸ್ಟರ್ ಸ್ಮಾರಕ ‘ಎ’ ಡಿವಿಜನ್‌ನಲ್ಲಿ ದೇರಳ ಕಟ್ಟೆಯ ಯೆನೆಪೊಯ ಹಾಗೂ ದಿ.ಪಳ್ಳಿ ಜಯರಾಂ ಶೆಟ್ಟಿ ಸ್ಮಾರಕ ‘ಬಿ’ ಡಿವಿಜನ್ ಫುಟ್ಬಾಲ್ ಲೀಗ್ ಪಂದ್ಯಾಟದಲ್ಲಿ ಮಂಗಳೂರಿನ ರೇಂಜರ್ಸ್ ತಂಡವು ಪ್ರಶಸ್ತಿ ಪಡೆದುಕೊಂಡಿತು.

ಎ ಡಿವಿಜನ್‌ನಲ್ಲಿ ಯೆನೆಪೊಯ ತಂಡವು 1-0 ಗೋಲಿನಿಂದ ಬೋಳಾರ ಬ್ರದರ್ಸ್ ತಂಡವನ್ನು ಮತ್ತು ‘ಬಿ’ ಡಿವಿಜನ್‌ನಲ್ಲಿ ಮಂಗಳೂರಿನ ರೇಂಜರ್ಸ್ ತಂಡವು ಉಳ್ಳಾಲ ಅಲೇಕಲದ ಏಷ್ಯನ್ ಫುಟ್ಬಾಲ್ ಕ್ಲಬ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿತು.

ಪಾಂಡೇಶ್ವರ ಪೊಲೀಸ್ ಠಾಣಾಧಿಕಾರಿ ಗುರುರಾಜ್ ಹಾಗೂ ಬಂದರ್ ಠಾಣಾಧಿಕಾರಿ ಅಝ್ಮತ್ ಅಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಫುಟ್ಬಾಲ್ ಆಟಗಾರ ನೋಬರ್ಟ್ ಸಾಲ್ದಾನ, ದಿ.ಅಹ್ಮದ್ ಮಾಸ್ಟರ್ ಪುತ್ರ ಫಯಾಝ್, ಭಾಸ್ಕರ್ ಬೆಂಗರೆ, ಅರಿಫ್ ಉಚ್ಚಿಲ, ಖಜಾಂಚಿ ಫಿರೋಝ್ ಉಳ್ಳಾಲ್, ಅಬ್ದುಲ್ ಲತೀಫ್ ಕಸಬ, ಅಶ್ರಫ್ ಬೋಳಾರ, ಸಂಚಾಲಕ ಅಶ್ಫಾಕ್ ಭಾಗವಹಿಸಿದ್ದರು.

ಕಾರ್ಯದರ್ಶಿ ಹುಸೇನ್ ಬೋಳಾರ ಕಾರ್ಯಕ್ರಮ ನಿರೂಪಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News