ಕಸಬಾ ಬೆಂಗರೆಯಲ್ಲಿ ಪೊಲೀಸ್-ಜನಸಂಪರ್ಕ ಸಭೆ
Update: 2024-02-10 18:16 IST
ಮಂಗಳೂರು : ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಮತ್ತು ವಾಹನ ಸವಾರರು ಪಾಲಿಸಬೇಕಾದ ನಿಯಮಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮವು ಪಣಂಬೂರು ಪೊಲೀಸ್ ಠಾಣೆಯ ವತಿಯಿಂದ ಬೆಂಗರೆ ಕಸಬಾ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಪಣಂಬೂರು ಪೊಲೀಸ್ ನಿರೀಕ್ಷಕ ಮುಹಮ್ಮದ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಸ್ಸೈ ಜ್ಞಾನಶೇಖರ್, ಹೆಚ್‌ಸಿ ನವೀನ್, ಲಕ್ಷ್ಮಣ್, ಅಂಬಣ್ಣ ಮತ್ತು ಸಿಬ್ಬಂದಿಗಳಾದ ವಿನಯ್, ಜಗದೀಶ್ವರ್, ಮಂಜುನಾಥ್, ಶರಣಬಸಪ್ಪ, ದೇವರಾಜ್, ಬೆಂಗರೆ ಜಮಾಅತ್ ಕಮಿಟಿಯ ಅಧ್ಯಕ್ಷ ಬಿಲಾಲ್ ಮೊಯ್ದಿನ್, ಪ್ರಧಾನ ಕಾರ್ಯದರ್ಶಿ ಕಬೀರ್, ಉಪಾಧ್ಯಕ್ಷ ರಾದ ಸಿಪಿ ಮುಸ್ತಫ, ಬಿ.ಎಚ್ ಸಲೀಂ, ಸ್ಥಳೀಯ ಮಸೀದಿಗಳ ಖತೀಬರಾದ ಮುಹಮ್ಮದ್ ಶರೀಫ್ ದಾರಿಮಿ, ಅನ್ಸಾರ್ ಇರ್ಫಾನಿ, ನಾಸಿರ್ ಕೌಸರಿ ಉಪಸ್ಥಿತರಿದ್ದರು.