ವೈಶಾಕ್‌ಗೆ ಡಾಕ್ಟರೇಟ್ ಪದವಿ
Update: 2024-02-10 18:25 IST
ಮಂಗಳೂರು: ನಗರದ ಪ್ರತಿಷ್ಠಿತ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ಇಂಜನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ವೈಶಾಕ್ ಎನ್‌ಎಲ್ ‘ಇನ್ವೆಸ್ಟಿಗೇಶನ್ ಆಫ್ ಡಿಫಾರ್ಮೆಶನ್ ಆ್ಯಂಡ್ ಸ್ಟಿಂಗ್‌ಬ್ಯಾಕ್ ಎಫೆಕ್ಟ್ ಆನ್ ಬೆಂಡಿಂಗ್ ಆಫ್ ತಿನ್‌ವಾಲ್ಡ್ ಅಲುಮಿನಿಯಂ ಎಲ್ಲೊಯ್ ಟ್ಯೂಬ್’ ಎಂಬ ವಿಷಯದಲ್ಲಿ ಮಂಡಿಸಿದ ಡಾಕ್ಟರಲ್ ಮಹಾ ಪ್ರಬಂಧಕ್ಕೆ ಕರ್ನಾಟಕ ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವಾವಿದ್ಯಾನಿಲಯವು ಡಾಕ್ಟರ್ ಆಫ್ ಫಿಲೋಸಫಿ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಸಯನ್ಸ್ ಪದವಿಯನ್ನು ನೀಡಿದೆ.
ನಾರ್ಶ ಲಕ್ಷ್ಮಿನಾರಾಯಣ ಬಳ್ಳುಕ್ಕೂರಾಯ-ವಿನಯ ಕುಮಾರಿ ದಂಪತಿಯ ಪುತ್ರನಾಗಿರುವ ಪ್ರೊ.ವೈಶಾಕ್ ಎನ್‌ಎಲ್ ಅವರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಹಾಗೂ ಪ್ರಾಂಶುಪಾಲ ಡಾ.ದಿಲೀಪ್ ಕುಮಾರ್ ಕೆ. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.