ಬಿಎಸ್ಸಿ ಪರೀಕ್ಷೆ: ದೀನಾಗೆ ರಾಜ್ಯಮಟ್ಟದಲ್ಲಿ ನಾಲ್ಕನೇ ರ‍್ಯಾಂಕ್
Update: 2024-02-10 18:29 IST
ಮಂಗಳೂರು, ಫೆ.10: ಬೆಂಗಳೂರಿನ ರಾಜೀವ್‌ಗಾಂಧಿ ಆರೋಗ್ಯ ವಿವಿಯು ನಡೆಸಿದ ಎರಡನೆ ವರ್ಷದ ಬಿಎಸ್ಸಿ ಇನ್ ಅಪ್ಟೊಮೆಟ್ರಿ ಪರೀಕ್ಷೆಯಲ್ಲಿ ನಗರದ ಎಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್‌ನ ವಿದ್ಯಾರ್ಥಿನಿ ದೀನಾ ರಝಾಕ್ ಹಾಮದ್ ಅವರು ರಾಜ್ಯಮಟ್ಟದಲ್ಲಿ ನಾಲ್ಕನೇ ರ‍್ಯಾಂಕ್ ಗಳಿಸಿದ್ದಾರೆ.
580ರಲ್ಲಿ 411 ಅಂಕದೊಂದಿಗೆ ಶೇ.70.86 ಫಲಿತಾಂಶ ದಾಖಲಿಸಿರುವ ಇವರು ಕೂಳೂರಿನ ರಝಾಕ್ ಹಾಮದ್ ಬ್ಯಾರಿ-ರೇಶ್ಮಾ ರಝಾಕ್ ಅವರ ಪುತ್ರಿ.