×
Ad

ಹಳೆಯಂಗಡಿ ಕದಿಕೆ ಉರೂಸ್ ಸಮಾರೋಪ

Update: 2024-02-11 19:11 IST

ಹಳೆಯಂಗಡಿ: ಹೊಸಂಗಡಿ ಕದಿಕೆಯಲ್ಲಿ ಹಝ್ರತ್ ಸೈಯದ್ ಮೌಲಾನಾ ವಲಿಯುಲ್ಲಾಹಿ (ಖ.ಸಿ) ಅವರ ಉರೂಸ್ ಸಮಾರಂಭದ ಸಮಾರೋಪ ಹಾಗೂ ರಾಜ್ಯ ಮಟ್ಟದ ದಫ್ ಸ್ಪರ್ಧಾಕೂಟ ಶನಿವಾರ ದರ್ಗಾ ವಠಾರದಲ್ಲಿ ನೆರವೇರಿತು.

ಸಮಾರಂಭವನ್ನು ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಪಿ.ಎ. ಅಬ್ದುಲ್ಲಾ ಝೈನಿ ಬಡಗನ್ನೂರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಕೆ. ಅಬ್ದುಲ್ ರಹಿಮಾನ್ ಕುಡುಂಬೂರು ಸಾಗ್ ವಹಿಸಿದ್ದರು. ದುವಾ ಆಶೀರ್ವಚನವನ್ನು ನೂರುಸ್ಸಾದಾತ್ ಬಾಯಾರ್ ತಂಙಳ್ ಬಾಯಾರ್ ಕೇರಳ ನೆರವೇರಿಸಿದರು.

ಸಮಾರಂಭದಲ್ಲಿ ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ, ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಜುಮಾ ಮಸೀದಿಯ ಖತೀಬ್ ಅಬೂಬಕರ್ ಮದನಿ, ಇಂದಿರಾನಗರ ಖಿಲ್ರಿಯಾ ಮದರಸದ ಸದರ್ ಮುಅಲ್ಲಿಂ ಇಮ್ರಾನ್ ಮಖ್ದೂಮಿ ಕೃಷ್ಣಾಪುರ, ಕದಿಕೆ ನೂರುಲ್ ಹುದಾ ಮದರಸದ ಸದರ್ ಮುಅಲ್ಲಿಂ ಮುಹಮ್ಮದ್ ಶರೀಫ್ ಉಪಸ್ಥಿತರಿದ್ದರು.

ಮುಖ್ಯ ಅಥಿತಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪ್ರಿಯದರ್ಶಿನಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಸಂತ್ ಬರ್ನಾರ್ಡ್, ದ.ಕ. ಜಿಲ್ಲಾ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು. ರಾಜ್ಯ ಮುಸ್ಲಿಂ ಲೀಗ್ ನ ಇಬ್ರಾಹೀಂ ಜಲಾಲಿಯಾ ರಾತೀಬ್ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕದಿಕೆ, ಉದ್ಯಮಿ ಗುಲಾಮ ಮಹಮ್ಮದ್ ಹೆಜಮಾಡಿ, ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯ ಉಮೇಶ್ ಪೂಜಾರಿ, ಉರೂಸ್ ಸಮಿತಿಯ ಅಧ್ಯಕ್ಷ ಜಮಾಲುದ್ದೀನ್ ಕದಿಕೆ, ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಮುಹಮ್ಮದ್ ಎಚ್.ಕೆ., ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಮುಸ್ಲಿಂ ಜಮಾಅತ್ ಒಕ್ಕೂಟದ ಅಧ್ಯಕ್ಷ ಕೆ. ಸಾಹುಲ್ ಹಮೀದ್ ಕದಿಕೆ, ಜುಮಾ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್ ಕಜಕತೋಟ, ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷ ಬಶೀರ್ ಕಲ್ಲಾಪು, ಉರೂಸ್ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಖಾದರ್ ಮೇಗಿನ ಮನೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಬ್ದುಲ್ ರಝಾಕ್ ಸ್ವಾಗತಿಸಿದರು. ಇರ್ಷಾದ್ ಕದಿಕೆ ಕಾರ್ಯಕ್ರಮ ನಿರೂಪಿಸಿ, ದನ್ಯವಾದಗೈದರು.

ಸಮಾರೋಪ ಸಮಾರಂಭದ ಬಳಿಕ ನಡೆದ ರಾಜ್ಯ ಮಟ್ಟದ ದಫ್ ಸ್ಪರ್ಧಾಕೂಟದಲ್ಲಿ ಕಲಂದರ್ ಷಾ ದಫ್ ಕಮಿಟಿ ಮಣಿಪುರ ಕಟಪಾಡಿ ಚಾಂಪಿಯನ್ ಪಡೆದು ಕೊಂಡರೆ, ಸಿರಾಜುಲ್ ಹುದಾ ದಫ್ ಕಮಿಟಿ ಮಜೂರು ಮಲ್ಲಾರು ರನ್ನರ್ ಅಪ್ ಮತ್ತು ದ್ವಿತೀಯ ಹಾಗೂ ಲಜಿನತುಲ್ ಅನ್ಸಾರಿಯಾ ದಫ್ ಕಮಿಟಿ ಕೃಷ್ಣಾಪುರ ತೃತೀಯ ಸ್ಥಾನದ ಜೊತೆಗೆ ಪ್ರಶಸ್ತಿ ಮತ್ತು ನಗದು ಪರಸ್ಕಾರವನ್ನು ಪಡೆಯಿತು. ಉತ್ತಮ‌ಗಾಯಕ ಪ್ರಶಸ್ತಿಯನ್ನು ಕಲಂದರ್ ಷಾ ದಫ್ ಕಮಿಟಿ ಮಣಿಪುರ ಇದರ ಹಾಡುಗಾರರು ಪಡೆದು ಕೊಂಡರು.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News