ಮಂಗಳೂರು : ರೈಲು ಢಿಕ್ಕಿ ಹೊಡೆದು ಯುವಕ ಮೃತ್ಯು
Update: 2024-02-11 21:08 IST
ಉಳ್ಳಾಲ: ಫೆ.14ರಂದು ಸೌದಿಗೆ ತೆರಳಲು ಸಿದ್ಧತೆ ನಡೆಸಿದ್ದ ಯುವಕನೋರ್ವ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಂಕೊಳಿಗೆ ರೈಲ್ವೇ ಹಳಿಯಲ್ಲಿ ಶನಿವಾರ ತಡರಾತ್ರಿ ವೇಳೆ ಸಂಭವಿಸಿದೆ.
ಉಚ್ಚಿಲ ರೈಲ್ವೇ ಗೇಟ್ ಸಮೀಪದ ನಿವಾಸಿ ಹಸೈನಾರ್ ಎಂಬವರ ಪುತ್ರ ಜಾಫರ್ (22) ಮೃತ ಯುವಕ. ನಿನ್ನೆ ಸಂಜೆ ವೇಳೆ ಮನೆ ಕಡೆಗೆ ತೆರಳುವ ಸಂದರ್ಭ ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಮೃತನ ಸಹೋದರ ಸೌದಿ ಅರೇಬಿಯಾದಲ್ಲಿದ್ದು ಜಾಫರ್ ಗೂ ವೀಸಾ ಕಳಿಸಿದ್ದರು. ಇತ್ತೀಚೆಗಷ್ಟೇ ಮುಂಬೈನಿಂದ ಊರಿಗೆ ಬಂದಿದ್ದ ಜಾಫರ್ ಫೆ.14ರಂದು ಸೌದಿಗೆ ತೆರಳಲು ಸಿದ್ಧತೆ ನಡೆಸಿದ್ದರು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.