×
Ad

ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಸಂಜೀವ ಶೆಟ್ಟಿ ಪುನರಾಯ್ಕೆ

Update: 2024-02-15 21:54 IST

ಮುಳ್ಳೇರಿಯ: ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಎಂ. ಸಂಜೀವ ಶೆಟ್ಟಿ ಮೊಟ್ಟೆಕ್ಕುಂಜ ಪುನರಾಯ್ಕೆಯಾಗಿದ್ದಾರೆ.

ಬುಧವಾರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಚುನಾವಣಾ ಸಭೆಯಲ್ಲಿ 2024-29 ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎಂ ಸಂಜೀವ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಎಂ ಶ್ರೀಧರ ಭಟ್ ಆಯ್ಕೆಯಾದರು. ಎಂ ಸಂಜೀವ ಶೆಟ್ಟಿ ಅವರು 1995 ರಿಂದಲೇ ಅವಿರೋಧವಾಗಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ.

ಕಳೆದ 55 ವರ್ಷಗಳ ಸುಧೀರ್ಘ ಕಾಲ ಸಹಕಾರಿ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದಂತೆ ನಿರ್ದೇಶಕರಾಗಿ ರಾಮಕೃಷ್ಣ ಭಟ್, ಜಯಪ್ರಕಾಶ್ ಶೆಟ್ಟಿ, ವೇಣುಗೋಪಾಲ ಕೆ, ನಾರಾಯಣ .ಎಂ, ಹರಿನಾರಾಯಣ .ಎಸ್, ಅಣ್ಣಪ್ಪ, ಜಯಂತಿ ಎಸ್. ರೈ, ಜಯಂತಿ .ವಿ, ಸವಿತಾ .ಕೆ ಆಯ್ಕೆಯಾಗಿದ್ದಾರೆ.

ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಗಣೇಶ್ ಪಾರೆಕಟ್ಟೆ, ಆರ್. ಎಸ್.ಎಸ್ ಜಿಲ್ಲಾ ವ್ಯವಸ್ಥಾ ಪ್ರಮುಖ್ ದಿನೇಶ್ ಕುಂಬಳೆ, ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಐತಪ್ಪ ಮವ್ವಾರು, ಸಹಕಾರಿ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಪಟ್ಟಾಜೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ ಸುಧಾಮ ಗೋಸಾಡ , ಕುಂಬ್ಡಾಜೆ ಪಂಚಾಯತು ಸಮಿತಿಯ ಅಧ್ಯಕ್ಷ ಹರೀಶ್ ಗೋಸಾಡ, ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ಬಿಜೆಪಿ ಮಂಡಲ ಉಪಾಧ್ಯಕ್ಷ ಕೃಷ್ಣ ಶರ್ಮಾ ಜಿ, ಮಂಡಲ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News