×
Ad

ಡಾ.ಆರತಿ ಕೃಷ್ಣರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ʼಗಲ್ಫ್ ರಿಟಾಯರೀಸ್ ಅಸೋಸಿಯೇಷನ್ʼ

Update: 2024-02-17 19:20 IST

ಮಂಗಳೂರು: ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) ವತಿಯಿಂದ 11 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ನಗರ ಹೊರವಲಯದ ಗಂಜಿಮಠದಲ್ಲಿರುವ ಝಾರಾ ಕನ್ವೆಂಶನ್ ಸೆಂಟರ್‌ ನಲ್ಲಿ ಶನಿವಾರ ನಡೆಯಿತು.

ಈ ಸಾಮೂಹಿಕ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಅನಿವಾಸಿ ಕನ್ನಡಿಗರ ಕೋಶದ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ ಅವರನ್ನು GRA (ಗಲ್ಫ್ ರಿಟಾಯರೀಸ್ ಅಸೋಸಿಯೇಷನ್) ಅಧ್ಯಕ್ಷರಾದ ಹಂಝ ಮಿತ್ತೂರು ಅವರ ನೇತೃತ್ವದಲ್ಲಿ ಭೇಟಿಯಾದ‌ GRA ನಿಯೋಗ ಗಲ್ಫ್‌ ನಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಮತ್ತು ರಿಟಾಯರ್ ಆದ ಉದ್ಯೋಗಿಗಳಿಗೆ ಕೇರಳದ ರೀತಿಯಲ್ಲಿ ಸರಕಾರಿ ಸವಲತ್ತು ಒದಗಿಸುವಂತೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News