ಎಸ್ಕೆಎಸ್ಸೆಸ್ಸೆಫ್ ದ.ಕ. ಈಸ್ಟ್ ಜಿಲ್ಲಾ ಅಧ್ಯಕ್ಷರಾಗಿ ಮಹಮ್ಮದ್ ನವವಿ ಮುಂಡೋಳೆ ಆಯ್ಕೆ
ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ದ.ಕ. ಈಸ್ಟ್ ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆಯು ಬುಧವಾರ ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂ ನಲ್ಲಿ ಅಧ್ಯಕ್ಷ ತಾಜುದ್ದೀನ್ ರಹ್ಮಾನಿ ಅವರ ಅಧ್ಯಕ್ಷತೆಯಲ್ಲಿ ನಡೆದು ನೂತನ ಪದಾಧಿಕಾರಿ ಗಳ ಆಯ್ಕೆ ಮಾಡಲಾಯಿತು.
ಎಸ್ಕೆಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಕಾರ್ಯಕ್ರಮ ಉದ್ಘಾಟಿಸಿದರು. ಕೊಡಾಜೆ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ದುಆ ನೆರವೇರಿಸಿದರು. ಪ್ರದಾನ.ಕಾರ್ಯದರ್ಶಿ ಹಾರಿಸ್ ಕೌಸರಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಇಝುದ್ದೀನ್ ನಿಝಾಮಿ ತರಬೇತಿ ಶಿಬಿರ ನಡೆಸಿಕೊಟ್ಟರು. ಚುನಾವಣಾಧಿಕಾರಿ ಹಬೀಬ್ ಫೈಝಿ ನೇತೃತ್ವದಲ್ಲಿ ದ. ಕ. ಈಸ್ಟ್ ಜಿಲ್ಲಾ ಸಮಿತಿಯ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಮುಹಮ್ಮದ್ ನವವಿ ಮುಂಡೋಳೆ, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಕೌಸರಿ ಕೋಲ್ಪೆ, ಕೋಶಾಧಿಕಾರಿಯಾಗಿ ಜಮಾಲ್ ಕೊಡಪದವು, ಕಾರ್ಯದರ್ಶಿ ಯಾಗಿ ಯಾಸೀರ್ ಬೊಂಟ್ರಪಾಲ್ ಕಕ್ಕಿಂಜೆ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಶೀದ್ ರಹ್ಮಾನಿ, ಜಮಾಲ್ ಕೆ ಎಸ್ ಬೆಳ್ಳಾರೆ ,ಅಶ್ರಫ್ ಶೇಡಿಗುಂಡಿ, ಟಿ.ಎ. ಝಕರಿಯ್ಯ ಅಸ್ಲಮಿ, ಸ್ವದಕತ್ತುಲ್ಲಾ ದಾರಿಮಿ, ಜೊತೆ ಕಾರ್ಯದರ್ಶಿಗಳಾಗಿ ಖಲೀಮುಲ್ಲಾಹ್ ಕಡಬ, ಅಶ್ರಫ್ ಮುಕ್ವೆ,ಸಿದ್ದೀಕ್ ಅಡ್ಕ ಸುಳ್ಯ, ಸಂಘಟನಾ ಕಾರ್ಯದರ್ಶಿಗಳಾಗಿ ಯಾಸಿರ್ ಕೌಸರಿ ,ಜಬ್ಬಾರ್ ಅಸ್ಲಮಿ , ಅಹ್ಮದ್ ನಿಝಾರ್ ಮುಸ್ಲಿಯಾರ್ ಹಾಗೂ 10 ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆರಿಸಲಾಯಿತು.