ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂ-ಡಿಸಿಎಂಗೆ ಮನವಿ
ಮಂಗಳೂರು, ಫೆ.18: ಕರಾವಳಿ ಸಹಿತ ಕರ್ನಾಟಕ ರಾಜ್ಯಾದ್ಯಂತ ಸುಮಾರು ಇಪ್ಪತ್ತೈದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಬ್ಯಾರಿ ಜನಾಂಗದ ಶ್ರೆಯೋಬಿವೃದ್ದಿಗೆ ಕರ್ನಾಟಕ ರಾಜ್ಯ ಬ್ಯಾರಿ ಆಭಿವೃದ್ದಿ ನಿಗಮ ಸ್ಥಾಪಿಸುವಂತೆ ಒತ್ತಾ ಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸ್ಪೀಕರ್ ಯು.ಟಿ.ಖಾದರ್ ಅವ ರನ್ನು ನಿಯೋಗವೊಂದು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದೆ.
ಬ್ಯಾರಿ ಜನಾಂಗವನ್ನು ಧಾರ್ಮಿಕ ಅಲ್ಪಸಂಖ್ಯಾತ ನೆಲೆಯಲ್ಲಿ ಪರಿಗಣಿಸಲ್ಪಟ್ಟಿದೆ. ಬ್ಯಾರಿ ಭಾಷಾ ಅಲ್ಪಸಂಖ್ಯಾತ ಜನಾಂಗವು ಇತರ ಸಮುದಾಯಕ್ಕಿಂತ ಭಿನ್ನವಾಗಿ ಗುರುತಿಸಿಕೊಂಡಿದೆ. ಬ್ಯಾರಿ ಆಡು ಭಾಷೆಯ್ಗಾದ್ದು, ದ್ರಾವಿಡ ಮೂಲ ಭಾಷೆಯಾದ ತಮಿಳು ಪದಕ್ಕೆ ಸಾಮಿಪ್ಯ ಹೊಂದಿರುವ ಅನೇಕ ಜನಪದಗಳನ್ನು ತನ್ನ ದೈನಂದಿನ ಚಟುವಟಿಕೆಯಲ್ಲಿ ಬಳಕೆ ಮಾಡುತ್ತಿದ್ದಾರೆ. ನಾನಾ ಕ್ಷೇತ್ರದಲ್ಲಿ ಈ ಬ್ಯಾರಿ ಜನಾಂಗವು ಹಿಂದುಳಿದಿದೆ. ಹಾಗಾಗಿ ಸರಕಾರದ ನೇರ ಸೌಲಭ್ಯಗಳನ್ನು ಪಡೆಯಲು ಅಭಿವೃದ್ದಿ ನಿಗಮ ಸ್ಥಾಪನೆ ಮಾಡುವಂತೆ ನಿಯೋಗ ಆಗ್ರಹಿಸಿದೆ.
ರಾಜ್ಯದಲ್ಲಿ ಇತರ ಭಾಷಾ ಅಲ್ಪಸಂಖ್ಯಾತ, ವೃತ್ತಿ ಅಲ್ಪಸಂಖ್ಯಾತ ಜನರ ಅಭಿವೃದ್ಧಿಗೆ ಸರಕಾರ ವಿಶೇಷ ಕೊಡುಗೆ ನೀಡಿ ನಿಗಮ ಸ್ಥಾಪಿಸಿದೆ. ಅದರಂತೆ ರಾಜ್ಯದ 25 ಲಕ್ಷ ಬ್ಯಾರಿ ಜನಾಂಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ದಿ ಉದ್ದೇಶಿತ, ವಾರ್ಷಿಕ ರೂಪಾಯಿ 200 ಕೋ.ರೂ. ನಿಧಿ ಮೀಸಲು ಯೋಜನೆಯ, ಕರ್ನಾಟಕ ರಾಜ್ಯ ಬ್ಯಾರಿ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಬೇಕು ಎಂದುಮನವಿ ಸಲ್ಲಿಸಿದೆ.
ನಿಯೋಗದಲ್ಲಿ ಅಬ್ದುಲ್ ಅಝೀಝ್ ಬೈಕಂಪಾಡಿ, ಅಬ್ದುಲ್ ಜಲೀಲ್ ಕೃಷ್ಣಾಪುರ, ಮುಹಮ್ಮದ್ ಶಾಕಿರ್, ಮುಹಮ್ಮದ್ ಹನೀಫ್ ಯು, ಬಾವಾ ಪದರಂಗಿ, ಮುಹಮ್ಮದ್ ಅಶ್ರಫ್ ಬದ್ರಿಯಾ, ಇ.ಕೆ.ಹುಸೈನ್, ಮುಹಮ್ಮದ್ ಸಾಲಿಹ್ ಬಜ್ಪೆ, ಹಮೀದ್ ಕಿನ್ಯ, ಅಬ್ದುಲ್ ಲತೀಫ್ ಬ್ಲೂಸ್ಟಾರ್, ಅಬ್ದುಲ್ ಖಾದರ್ ಇಡ್ಮಾ ಮುಂತಾದವರಿದ್ದರು.